‘ಇಳಯದಳಪತಿ’ ವಿಜಯ್ ಮಾಸ್ಟರ್ ಸಿನ್ಮಾ ರಿವ್ಯೂವ್..!

1 min read

‘ಇಳಯದಳಪತಿ’ ವಿಜಯ್ ಮಾಸ್ಟರ್ ಸಿನ್ಮಾ ರಿವ್ಯೂವ್..!

ವಿಭಿನ್ನ ಚಿತ್ರಗಳು ಹಾಗೂ ವಿಶಿಷ್ಟ ಅಭಿನಯದಿಂದ ಅನೇಕ ಅಭಿಮಾನಿಗಳನ್ನು ಸಂಪಾದಿಸಿರುವ ಕಾಲಿವುಡ್ ಸ್ಟಾರ್ ಹೀರೋ, ‘ಇಳಯದಳಪತಿ’ ವಿಜಯ್. ಕಳೆದ ಕೆಲವು ವರ್ಷಗಳಿಂದ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನೊಂದಿಗೆ ಕಾಲಿವುಡ್ ನಲ್ಲಿ ಟಾಪ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ.

ಸಾಲು ಸಾಲಾಗಿ ಚಿತ್ರಗಳನ್ನು ಘೋಷಿಸುತ್ತಾ ವಿಜಯ್ ಸಾಗುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬುಧವಾರ ವಿಜಯ್ ‘ಮಾಸ್ಟರ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಸಾಮಾನ್ಯವಾಗಿ ವಿಜಯ್ ಮೂವಿ ಎಂದರೆ ಅಭಿಮಾನಿಗಳ ಕ್ರೇಜ್ ಬೆಟ್ಟದಷ್ಟಿರುತ್ತದೆ. ಇದಲ್ಲದೇ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ವಿಜಯ್ ಜೊತೆ ತೆರೆ ಹಂಚಿಕೊಂಡಿದ್ದು ಕಾಲಿವುಡ್ ಇಂಡಸ್ಟ್ರಿಯಲ್ಲಿ, ಅಭಿಮಾನಿಗಳಲ್ಲೂ ನಿರೀಕ್ಷೆಗಳು ಹೆಚ್ಚಾಗಿದ್ದವು.

ಹಾಗಾದ್ರೆ ಮಾಸ್ಟರ್ ಗೆ ಅಭಿಮಾನಿಗಳು ಪಿಧಾ ಆದ್ರಾ..? ವಿಜಯ್ ತನ್ನ ಯಶಸ್ಸನ್ನು ಮುಂದುವರೆಸಿದ್ದಾರೆಯೇ.. ಇಲ್ಲವೇ..? ಮುಂದೆ ಓದಿ.

ಕಥೆ ವಿಚಾರಕ್ಕೆ ಬಂದ್ರೆ ಭವಾನಿ (ವಿಜಯ್ ಸೇತುಪತಿ) ಹೆಸರು ವಾಸಿ ರೌಡಿಶೀಟರ್. ಅವನು ಹೇಗಿದ್ದಾನೆ ಎಂಬುದರ ಬಗ್ಗೆ ಜನರಿಗೆ ಹೆಚ್ಚು ತಿಳಿದಿರುವುದಿಲ್ಲ. ಆದ್ರೆ ಅವನು ಎಂಥ ಕ್ರೂರಿ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಲಾರಿಗಳಲ್ಲಿ ಮಾದಕ ಪದಾರ್ಥಗಳನ್ನು ಸರಬರಾಜು ಮಾಡುತ್ತಾ ರಾಜಕೀಯವಾಗಿ ಬೆಳೆಯೋದು ಭವಾನಿಯ ಆಸೆಯಾಗಿರುತ್ತೆ. ಅದರ ಭಾಗವಾಗಿಯೇ ಮೊದಲು, ಲಾರಿ ಯುನಿಯನ್ ಅಧ್ಯಕ್ಷನಾಗಲು ಬಯಸುತ್ತಾನೆ. ಅದರಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರತಿಸ್ಪರ್ಧಿಗಳನ್ನು ಕೊಲ್ಲಲು ಪ್ಲಾನ್ ಮಾಡ್ತಾನೆ.

ಇನ್ನೊಂದು ಕಡೆ ಜೆಡಿ ( ವಿಜಯ್ ) ಯಾವುದೇ ನಿಯಮಗಳನ್ನು ಪಾಲಿಸದ ಕಾಲೇಜು ಪ್ರಾಧ್ಯಾಪಕ. ಮದ್ಯವ್ಯಸನಕ್ಕೆ ದಾಸರಾಗಿ, ಸಹ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸುತ್ತಾನೆ. ಸಹೋದ್ಯೋಗಿಗಳಿಗೆ ಇಷ್ಟವಾಗದಿದ್ದರೂ ಜೆಡಿ ಅಂದ್ರೆ ವಿದ್ಯಾರ್ಥಿಗಳಿಗೆ ಹೀರೋ. ಜೆಡಿ ಸರ್ ಇಲ್ಲದೆ ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯೋದಿಲ್ಲ. ಜೆಡಿ ಸರ್ ಗಾಗಿ ವಿದ್ಯಾರ್ಥಿಗಳು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇಂತಹ ಜೆಡಿ ಕೆಲವು ಕಾರಣಗಳಿಗಾಗಿ ಆ ಊರಿನ ಬಾಲ ಅಪರಾಧಿಗಳಿಗೆ ಪಾಠ ಕಲಿಸಬೇಕಾಗುತ್ತದೆ.

master

ಮೊದಲು ಅರ್ಧ ಮನಸ್ಸಿನಿಂದಲೇ ಅಲ್ಲಿಗೆ ಹೋಗೋ ಜೆಡಿಗೆ ಅನಿರೀಕ್ಷಿತ ಘಟನೆವೊಂದು ಎದುರಾಗುತ್ತದೆ. ಈ ಕ್ರಮದಲ್ಲಿ, ಜೆಡಿ ಮತ್ತು ಭವಾನಿ ಮಧ್ಯೆ ಪರೋಕ್ಷವಾಗಿ ಯುದ್ಧ ಆರಂಭವಾಗುತ್ತದೆ. ಬಾಲ ಅಪರಾಧಿಗಳಿಗೂ ಮತ್ತು ಭವಾನಿಗೂ ಇರುವ ಸಂಬಂಧವೇನು..? ಮದ್ಯಕ್ಕೆ ದಾಸನಾಗಿದ್ದ ಜೆಡಿ ಸಡನ್ ಆಗಿ ಅದೆಲ್ಲಾ ಬಿಟ್ಟು, ಮಕ್ಕಳ ರಕ್ಷಣೆಗೆ ನಿಲ್ಲೋದ್ಯಾಕೆ..? sಭವಾನಿ ಕಟ್ಟಿದ ಸಾಮ್ರಾಜ್ಯವನ್ನು ಜೆಡಿ ಹೇಗೆ ಛಿದ್ರ ಮಾಡ್ತಾನೆ ಅನ್ನೋದೇ ಉಳಿದ ಕಥೆ.

ನಟರ ವಿಚಾರಕ್ಕೆ ಬಂದ್ರೆ ಅಶಿಸ್ತು ಕಾಲೇಜು ಪ್ರಾಧ್ಯಾಪಕರಾಗಿ ವಿಜಯ್, ಮಾಸ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಫಲರಾಗಿದ್ದಾರೆ. ವಿಜಯ್ ಸೇತುಪತಿ ಈ ಹಿಂದೆಂದೂ ಕಂಡರಿಯದ ರೀತಿ ಚಿತ್ರದಲ್ಲಿ ನಮಗೆ ಕಾಣ್ತಾರೆ. ತನ್ನ ಬೆಳವಣಿಗೆಗಾಗಿ ಎಂತಹ ಅನ್ಯಾಯವಾದರೂ ಮಾಡೋ ಕ್ರೂರಿಯಾಗಿ ಅಧ್ಭುತವಾಗಿ ನಟಿಸಿದ್ದಾರೆ. ಈ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಭವಾನಿ ಪಾತ್ರವನ್ನು ಮರೆಯುವುದಿಲ್ಲ. ಚಾರು ಪಾತ್ರದಲ್ಲಿ ಮಾಳವಿಕಾ ಮೋಹನ್ ಮೋಡಿ ಮಾಡಿದ್ದಾರೆ. ಆಂಡ್ರಿಯಾ ಮತ್ತು ಶಾಂತನು ಭಾಗ್ಯರಾಜ್ ಅವರ ಪರಧಿಯಲ್ಲಿ ನಟಿಸಿದ್ದಾರೆ.

ವಿಶ್ಲೇಷಣೆ
‘ಖೈದಿ’ ಯಂತಹ ಬ್ಲಾಕ್ ಬಸ್ಟರ್ ಹಿಟ್ ನಂತರ, ಲೋಕೇಶ ಕನಕರಾಜ್ ನಿರ್ದೇಶನ ಮಾಡಿದ ಚಿತ್ರವಾಗಿದ್ದರಿಂದ ಮಾಸ್ಟರ್ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದ್ರೆ ಆ ನಿರೀಕ್ಷೆಗಳನ್ನು ನಿರ್ದೇಶಕ ಲೋಕೇಶ್ ಹುಸಿಗೊಳಿಸಿದ್ದಾರೆ ಅಂತಾನೆ ಹೇಳಬಹುದು. ವಿಜಯ್ ಯಂತಹ ಮಾಸ್ ಹೀರೋ ಜೊತೆ ಸಂದೇಶನಾತ್ಮಕ ಸಿನಿಮಾಗೆ ಕಮರ್ಷಿಯಲ್ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಿನಿಮಾ ಮಾಡುವಲ್ಲಿ ನಿರ್ದೇಶಕರು ತಡವರಿಸಿದ್ದಾರೆ. ಮೊದಲ ಭಾಗದಲ್ಲಿ ಕಥೆ ಹೇಳದೆ ನಾಯಕ ಮತ್ತು ಖಳನಾಯಕನನ್ನು ಹೈಲೈಟ್ ಮಾಡಲಾಗಿದೆ. ಮಾದಕ ವ್ಯಸನಿಯಾಗಿದ್ದ ಪ್ರಾಧ್ಯಾಪಕನ ಮೇಲೆ ವಿದ್ಯಾರ್ಥಿಗಳು ಇಷ್ಟೊಂದು ಆಸಕ್ತಿ ಏಕೆ ಬೆಳೆಸಿಕೊಂಡಿದ್ದಾರೆ ಅನ್ನೋ ಬಲವಾದ ಕಾರಣಗಳನ್ನು ತೋರಿಸಿಲ್ಲ. ಹೋಗಲಿ ಮೂಲ ಕಥೆಯನ್ನು ದ್ವಿತೀಯಾರ್ಧದಲ್ಲಿ ತೋರಿಸಿದ್ದಾರಾ ಅಂತ ನೋಡಿದ್ರೆ ಅಲ್ಲೂ ಕೂಡ ಕೆಲವು ದೃಶ್ಯಗಳು ಬೂಮರ್ ಅನ್ನ ಎಳೆದಂತಿವೆ. ಇನ್ನು ಪ್ರತಿ ಬಾರಿ ನಾಯಕ ಹಿಂದೆ ತಿರುಗಿ ಹೆಜ್ಜೆ ಹಾಕುವುದು ಕೂಡ ಪ್ರೇಕ್ಷಕರಿಗೆ ಇಷ್ಟವಾಗುದಿಲ್ಲ. ನಾಯಕ ಮತ್ತು ಖಳನಾಯಕರ ನಡುವಿನ ಫೈಟ್ ಕೂಡ ಆಸಕ್ತಿಕರವಾಗಿಲ್ಲ.

ನಾಯಕ ಮತ್ತು ಖಳನಾಯಕ ಸ್ಟ್ರಾಂಗ್ ಆಗಿದ್ದಾರೆ, ಆದರೆ ಅವರು ಭೇಟಿ ಮಾಡಿದ ದೃಶ್ಯಗಳು ಅಷ್ಟೇನೂ ಆಕರ್ಷಕವಾಗಿಲ್ಲ. ಚೈಲ್ಡ್ ಕ್ರಿಮಿನಲ್ ಅಬ್ಸರ್ವೇಶನ್ ಹೋಮ್ ಹಿನ್ನೆಲೆಯಲ್ಲಿ ಕಥೆಯನ್ನು ತಯಾರಿಸುವ ರೀತಿ ಉತ್ತಮವಾಗಿದೆ. ಅನಿರುದ್ಧ್ ಅವರ ಹಾಡುಗಳು ಓಕೆ ಓಕೆ ಅನ್ನೋ ರೀತಿ ಇದೆ. ಆದ್ರೆ ಹಿನ್ನೆಲೆ ಸಂಗೀತ ಚಿಂದಿ. ಆಕ್ಷನ್ ದೃಶ್ಯಗಳು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ‘ಮಾಸ್ಟರ್’ ಹೇಳೋ ಪಾಠಗಳು ಪ್ರೇಕ್ಷಕರಿಗೆ ಇಷ್ಟವಾಗದೇ ಇರಬಹುದು.

ಪ್ಲಸ್ ಪಾಯಿಂಟ್ಸ್ :
ವಿಜಯ್, ವಿಜಯ್ ಸೇತುಪತಿ ನಟನೆ.
ಹಿನ್ನೆಲೆ ಸಂಗೀತ
ಕಥೆಯ ಹಿನ್ನೆಲೆ

ಮೈನಸ್ ಪಾಯಿಂಟ್ಗಳು
ಆಮೆಗತಿ ಸ್ಕ್ರೀನ್ ಪ್ಲೇ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd