ನಾನು ಹುಲಿ ಇದ್ದಂತೆ : ಮಮತಾ ಬ್ಯಾನರ್ಜಿ ಘರ್ಜನೆ

1 min read
mamatha banerjee

ನಾನು ಹುಲಿ ಇದ್ದಂತೆ : ಮಮತಾ ಬ್ಯಾನರ್ಜಿ ಘರ್ಜನೆ

ಅಮ್ಲಾಸುಲಿ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರಿದ್ದು, ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ಸೇರಿದಂತೆ ಹಲವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅದರಂತೆ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಮ್ಲಾಸುಲಿಯಲ್ಲಿ ಮತಬೇಟೆ ನಡೆಸಿದ್ರು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಹುಲಿ ಇದ್ದಂತೆ. ಜನರ ಮುಂದೆ ಬಿಟ್ಟರೆ ಬೇರೆ ಯಾರ ಮುಂದೆಯೂ ತಲೆ ಬಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಬಿಜೆಪಿ ಮಹಿಳೆಯರನ್ನ, ದಲಿತರನ್ನು ಹಿಂಸಿಸುತ್ತದೆ. ನಾನು ಅವರನ್ನು ಬೆಂಬಲಿಸುವುದಿಲ್ಲ. ಅಡುಗೆ ಮಾಡುವಾಗ ಪಾತ್ರೆಗಳನ್ನು ಬಳಸುತ್ತೀರಿ. ಬಿಜೆಪಿಯ ಲೂಟಿಕೋರರು ಬಂದಾಗ ಆ ಪಾತ್ರಗಳಿಂದಲೇ ಅವರನ್ನು ಬೆನ್ನಟ್ಟಿ ಹೋಗಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

mamatha banerjee

ಪಶ್ಚಿಮ ಬಂಗಾಳಕ್ಕೆ ಅಂಘಾನ್ ಚಂಡಮಾರುತ ಅಪ್ಪಳಿಸಿದ್ದಾಗ, ಪರಿಹಾರವಾಗಿ ನಾವು ಸಾವಿರಾರು ಕೋಟಿಗಳನ್ನು ನೀಡಿದ್ದೇವೆ. ಆ ಸಮಯದಲ್ಲಿ ನೀವು ಎಲ್ಲಿದ್ದಿರಿ ಎಂದು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಕುದುರೆ ವ್ಯಾಪಾರಕ್ಕಾಗಿ ಮಾತ್ರ ನೀವು ಹಣ ವಿತರಿಸುವಿರಿ ಎಂದು ಟಾಂಗ್ ನೀಡಿದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd