ಪಾಕ್ ಕ್ಯಾಪ್ಟನ್ ಮೇಲೆ ಟೀಕೆಗಳ ಪ್ರವಾಹ
ಬಾಬರ್ ಅಜಂ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಹೆಸರು. ಟೆಸ್ಟ್, ಏಕದಿನ, ಟಿ 20 ಹೀಗೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಬಾಬರ್ ತಮ್ಮದೇಯಾದ ಛಾಪು ಮೂಡಿಸುತ್ತಾ ಮುನ್ನುಗ್ಗುತ್ತಿದ್ದಾರೆ.
ಆಧುನಿಕ ಕ್ರಿಕೆಟ್ ನ ಗಾಡ್ ವಿರಾಟ್ ಕೊಹ್ಲಿ ಬಳಿಕ ಸಾಕಷ್ಟು ಪ್ರಶಂಸೆಗಳಿಗೆ ಒಳಗಾಗುತ್ತಿರುವ ಬ್ಯಾಟರ್ ಅಂದು ಬಾಬರ್ ಅಜಂ.
ಇತ್ತೀಚಿಗಷ್ಟೆ ವಿರಾಟ್ ಕೊಹ್ಲಿ ಅವರ ದಾಖಲೆಯನ್ನ ಮುರಿದ ಬಾಬರ್ ಬಗ್ಗೆ ಹಲವು ಹಿರಿಯ ಕ್ರಿಕೆಟಿಗರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಈ ನಡುವೆ ಪಾಕಿಸ್ತಾನ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಮೇಲೆ ಸಹ ಆಟಗಾರನೇ ಅಸಹನೆ ಹೊರಹಾಕಿದ್ದಾರೆ.
ಬೇಕಂತಲೇ ರನ್ ಔಟ್ ಮಾಡಿದ ಎಂದು ಪಾಕ್ ಕ್ಯಾಪ್ಟನ್ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಸಲಿಗೆ ಅಲ್ಲಿ ಆಗಿದ್ದು ಏನಂದರೇ
ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ಮೊದಲು ಬ್ಯಾಟಿಂಗ್ ಮಾಡಿತು. 17 ರನ್ ಗಳಿಸಿದ್ದ ಆರಂಭಿಕ ಜಮಾನ್ ಔಟ್ ಆದ ಬಳಿಕ ನಾಯಕ ಬಾಬರ್ ಕ್ರೀಸ್ ಗೆ ಬಂದರು.
ಮತ್ತೊಂದು ಕಡೆ ಮತ್ತೊಬ್ಬ ಓಪನರ್ ಇಮಾಮುಲ್ ಹಕ್ ಜೊತೆ ಸೇರಿ ಬಾಬರ್ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಈ ಇಬ್ಬರ ನಡುವೆ ಎರಡನೇ ವಿಕೆಟ್ ಗೆ 120 ರನ್ ಗಳ ನಿರ್ಣಾಯಕ ಜೊತೆಯಾಟ ಕೂಡ ಬಂತು.

ಇನ್ನೇನು ಪಾಕಿಸ್ತಾನ್ ತಂಡ ಸೆಟಲ್ ಆಯ್ತು ಅನ್ನುವಷ್ಟರಲ್ಲಿ ನಾಯಕ ಬಾಬರ್ ಮಾಡಿದ ತಪ್ಪೊಂದು ವಿಕೆಟ್ ಬೀಳುವಂತೆ ಮಾಡಿತು. ಪಾಕಿಸ್ತಾನ್ ಇನ್ನಿಂಗ್ಸ್ ನ 28ನೇ ಓವರ್ನಲ್ಲಿ ಅಕಿಲ್ ಹಾಸೆನ್ ಬೌಲಿಂಗ್ ಮಾಡಲು ಬಂದರು.
ಇಮಾಮುಲ್ ಹಕ್ ಮಿಡ್ ವಿಕೆಟ್ ಕಡೆ ಚೆಂಡನ್ನು ಆಡಿ ಸಿಂಗಲ್ ಗೆ ಪ್ರಯತ್ನಿಸಿದರು. ಆದ್ರೆ ಚೆಂಡು ಹೆಚ್ಚು ದೂರ ಹೋಗದ ಕಾರಣ ಬಾಬರ್ ಓಡಲಿಲ್ಲ. ಆದ್ರೆ ಅದಾಗಲೇ ಇಮಾಮುಲ್ ಹಕ್ ಅರ್ಧ ಕ್ರೀಸ್ ದಾಟಿಬಿಟ್ಟಿದ್ದರು. ಇತ್ತ ಬಾಬರ್ ಕೂಡ ನೋ ಎಂದು ಕೂಗಿದರು.
ಸೀನ್ ಕಟ್ ಮಾಡಿದ್ರೆ
ಇತ್ತ ಚೆಂಡನ್ನು ತೆಗೆದುಕೊಂಡ ಶೆಯ್ ಹೋಪ್, ವಿಕೆಟ್ ಕೀಪರ್ ನತ್ತ ಎಸೆದರು. ಪರಿಣಾಮ ಇಮಾಮುಲ್ ಹಕ್ 72 ರನ್ ಗಳಿಗೆ ರನೌಟ್ ಆದರು. ಇದರಿಂದ ಕೋಪಗೊಂಡ ಇಮಾಮುಲ್ ಹಕ್ ರೊಚ್ಚಿಗೆದ್ದು ಬಾಬರ್ ಬಗ್ಗೆ ಅಸಹನೆ ಹೊರಹಾಕಿದರು.
ಪೆವಿಲಿಯನ್ ನತ್ತ ಹೋಗುವಾಗ ತನ್ನಲ್ಲಿದ್ದ ಕೋಪವನ್ನು ಬ್ಯಾಟ್ ಮೇಲೆ ತೋರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಬಾಬರ್ ಅಜಂ 77 ರನ್ ಗಳಿಗೆ ಔಟ್ ಆದರು. ಒಟ್ಟಾರೆ ಪಾಕಿಸ್ತಾನ್ ತಂಡ ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತು.
ಇನ್ನು ಬಾಬರ್ ಅವರ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಬರ್ ಅಭಿಮಾನಿಗಳು ಇಮಾಮುಲ್ ಹಕ್ ಅವರದ್ದೇ ತಪ್ಪು ಎಂದು ವಾದಿಸುತ್ತಿದ್ದರೇ, ಇನ್ನುಳಿದವರು ಬಾಬರ್ ಸ್ವಾರ್ಥಿ ಎಂದು ಟೀಕೆ ಮಾಡುತ್ತಿದ್ದಾರೆ.