IMDB Rating: ರೇಟಿಂಗ್ ನಲ್ಲಿ ‘ಪೊನ್ನಿಯನ್ ಸೆಲ್ವನ್’ ‘ವಿಕ್ರಮ್ ವೇದ’ ಹಿಂದಿಕ್ಕಿದ “ಕಾಂತಾರ”
ಕಳೆದ ವಾರ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಮತ್ತು ಮಣಿರತ್ನ ನಿರ್ದೇಶನದ ‘ಪೊನ್ನಿಯನ್ ಸೆಲ್ವಂ’ ಮತ್ತು ಹೃತಿಕ್ ರೋಷನ್ ಅಭಿನಯದ ‘ವಿಕ್ರಮ್ ವೇದ’ ಚಿತ್ರಗಳು ಬಿಡುಗಡೆಯಾಗಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿವೆ . ಮೂರು ಚಿತ್ರಗಳಿಗೂ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.
ತುಳುನಾಡಿನ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಕಾಂತಾರ ಚಿತ್ರದ ಈ ವರ್ಷದ ಬಿಗ್ ಹಿಟ್ ಗೆ ಸೇರುವ ಎಲ್ಲಾ ಲಕ್ಷಣಗಳಿವೆ. ಇನ್ನೂ ಬಿಗ್ ಬಜೆಟ್ ತಯಾರಾದ ತಮಿಳಿನ ‘ಪಿಎಸ್ 1’ ಗಳಿಗೆಯಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಮೊದಲ ವಾರಾಂತ್ಯದಲ್ಲಿಯೇ ಚಿತ್ರ 100 ಕೋಟಿ ಗಡಿ ದಾಟಿದೆ. ಬಾಲಿವುಡ್ ನ ವಿಕ್ರಮ್ ವೇದ ಚಿತ್ರದ ಕಲೆಕ್ಷನ್ ಕುರಿತು ಒಳ್ಳೆಯ ಟಾಕ್ ಕೇಳಿಬರುತ್ತಿದೆ.
ಇನ್ನೂ ಈ ಮೂರು ಚಿತ್ರಗಳಲ್ಲಿ IMDB ರೇಟಿಂಗ್ ನಲ್ಲಿ ಯಾವ ಸಿನಿಮಾ ಮುಂದಿದೆ ಎಂದು ನೋಡುವುದಾದರೇ ….
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ IMDB ರೆಟಿಂಗ್ ನಲ್ಲಿ 10 ರಲ್ಲಿ 9.7 ರೇಟಿಂಗ್ ಪಡೆದುಕೊಂಡಿದ್ದು, ಈ ವರ್ಷದ ಸೆನ್ಸೇಷನಲ್ ಹಿಟ್ ಎನಿಸಿದೆ.
ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವಂ 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಚಿತ್ರ IMDb ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಚಿತ್ರಕ್ಕೆ 10 ರಲ್ಲಿ 8.6 ರೇಟಿಂಗ್ ಸಿಕ್ಕಿದೆ.
ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ವಿಕ್ರಮ್ ವೇದ’ ತಮಿಳು ಚಿತ್ರದ ರಿಮೇಕ್ ಆಗಿದೆ. ವಿಕ್ರಂ ವೇದ ಚಿತ್ರದ IMDB ರೇಟಿಂಗ್ ಕೂಡ ಚೆನ್ನಾಗಿದೆ. ಚಿತ್ರಕ್ಕೆ 7.1 ರೇಟಿಂಗ್ ಸಿಕ್ಕಿದೆ.
IMDB Rating: Ponniyin Selvan Ps 1 Vikram Vedha Kantara Films IMDB Rating