ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜ್ಯೂಸ್ ಗಳು ಇವು…
ಈ ಚಳಿಗಾಲದಲ್ಲಿ ರೋಗ ನಿರೋಧ ಶಕ್ತಿಯನ್ನ ಹೆಚ್ಚಿಸಿಕೊಳ್ಳುವುದಕ್ಕಾಗಿ ನಿತ್ಯ ಆಹಾರದ ಜೊತೆಗೆ ಕೆಲವೊಂದಿಷ್ಟು ಹಣ್ಣುಗಳ ರಸಗಳು ಹೆಚ್ಚಿನ ಪರಿಣಾಮ ಮೀರುತ್ತವೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿವ ಹಣ್ಣಿನ ಜ್ಯೂಸ್ ಗಳು ಈ ರೀತಿ ಇವೆ..
- ಬೀಟ್ರೂಟ್-ಕ್ಯಾರೆಟ್-ಆಪಲ್ ಜ್ಯೂಸ್
ಚಳಿಗಾಲದ ಬೀಟ್ರೂಟ್ ಜೊತೆಗೆ ಕ್ಯಾರೆಟ್ ಮತ್ತು ಸೇಬು ಹಣ್ಣಿನ ಚೂರುಗಳನ್ನ ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
- ಆಪಲ್ ಮತ್ತು ಕಿನ್ನು ವಿಂಟರ್ ಪಂಚ್
ಸೇಬು, ಕಿತ್ತಳೆ ಮತ್ತು ಅನಾನಸ್ ಹಣ್ಣಿನಿಂದ ಮಾಡಿದ ಈ ಬೆಚ್ಚಗಿನ ಮಾಕ್ಟೈಲ್ ಚಳಿಗಾಲಕ್ಕೆ ಅತ್ಯುತ್ತಮ ಜೂಸ್. ಇದರ ಜೊತೆಗೆ ದಾಲ್ಚಿನ್ನಿ, ಜಾಯಿಕಾಯಿ, ನಿಂಬೆ ಮತ್ತು ಲವಂಗ ಚೂರ್ಣವನ್ನ ಸೇರಿಸಿ ಚೇನು ತುಪ್ಪದ ಜೊತೆ ಸೇವಿಸಿದರೆ ಇನ್ನೂ ಉತ್ತಮವಾಗಿರುತ್ತದೆ.
- ಸಾಂಬಾ
ದಾಲ್ಚಿನ್ನಿ, ಶುಂಠಿ, ಕಿತ್ತಳೆ ರಸ, ಸೇಬಿನ ರಸ, ಜೇನು ಮತ್ತು ನಿಂಬೆ – ಈ ಎಲ್ಲಾ ಆಹಾರಗಳನ್ನ ಒಂದು ಪಾನೀಯದಲ್ಲಿ ಒಟ್ಟಿಗೆ ಬೆರೆಸಿ ರುಚಿ ಸವೆದರೆ ಅದರ ಹೆಸರು ಸಾಂಬಾ…
- ಕಿತ್ತಳೆ ಮತ್ತು ತುಳಸಿ ರಸ
ರಸಭರಿತವಾದ ಕಿತ್ತಳೆ ಚಳಿಗಾಲದ ಪ್ರಮುಖ ಉತ್ಪನ್ನ ಅಂಶವಾಗಿದೆ. ಇದಕ್ಕೆ ತಾಜಾ ತುಳಸಿ ಎಲೆಗಳನ್ನು ಸೇರಿಸಿ ಮತ್ತು ಸ್ವಲ್ಪ ಜೇನುತುಪ್ಪದೊಂದಿಗೆ ಸಿಹಿಗೊಳಿಸಿದರೆ – ಉತ್ತಮ ಆರೋಗ್ಯ ಮತ್ತು ರುಚಿಗೆ ವಿಟಮಿನ್ ಸಿ ಭರಿತ ಪಾನೀಯ ಸಿದ್ಧವಾಗಿದೆ.
Immunity-Boosting Juices: These are the juices that boost immunity in winter.