ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದಕ್ಕೆ ಕಣ್ಣಿರು ಹಾಕಿದ ಮಹಿಳೆ…
ಬೀದರ್ : ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಮಹಿಳೆಯೊಬ್ಬಳು ಕಣ್ಣೀರು ಹಾಕುತ್ತಾ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ನಗರದ ಶಿವಾಜಿ ವೃತ್ತದಲ್ಲಿ ಇಂದು ಲಸಿಕಾ ಮಹಾಮೇಳ ನಡೆಯುತ್ತಿತ್ತು, ಆಟೋದಲ್ಲಿ ಬಂದ ಮೂವರು ಮಹಿಳೆಯರನ್ನು ನಿಲ್ಲಿಸಿ ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿಗಳು ಹೇಳಿದ್ದಾರೆ. ಇಷ್ಟಕ್ಕೆ ಓರ್ವ ಮಹಿಳೆ ಕಣ್ಣೀರು ಹಾಕುತ್ತಾ ಸ್ಥಳದಿಂದ ಕಾಲ್ಕಿತ್ತಿದರೆ ಉಳಿದ ಇಬ್ಬರು ಮಹಿಳೆಯರು ಲಸಿಕೆ ತೆಗೆದುಕೊಳ್ಳದೆ ಸ್ಥಳದಿಂದ ಪಲಾಯನಗೈದಿದ್ದಾರೆ.
ಶೇ. 96ರಷ್ಟು ಮೋದಲ ಡೋಸ್ ಲಸಿಕಾಕರಣ ಮಾಡಿರುವ ಬೀದರ್ ಜಿಲ್ಲಾಡಳಿತಕ್ಕೆ ಉಳಿದ ಶೇ.4 ರಷ್ಟು ಲಸಿಕೆ ನೀಡೋದು ತಲೆ ನೋವಾಗಿ ಪರಿಣಮಿಸಿದೆ.