ಮಾನವನಿಗೆ ಹಂದಿಯ ಹೃದಯ ಕಸಿ – ವೈದ್ಯಕೀಯ ರಂಗದಲ್ಲೇ ಪ್ರಥಮ ಪ್ರಯೋಗ

1 min read

ಮಾನವನಿಗೆ ಹಂದಿಯ ಹೃದಯ ಕಸಿ – ವೈದ್ಯಕೀಯ ರಂಗದಲ್ಲೇ ಪ್ರಥಮ ಪ್ರಯೋಗ

ವೈದ್ಯಕೀಯ ರಂಗದಲ್ಲೇ ಪ್ರಪ್ರಥಮ ಭಾರಿಗೆ  ವೈದ್ಯರು ಹಂದಿಯ ಹೃದಯವನ್ನು  ಮಾನವ ರೋಗಿಗೆ ಕಸಿ ಮಾಡಿದ್ದಾರೆ.  ಜೀವ ಉಳಿಸುವ ಕೊನೆಯ ಪ್ರಯತ್ನದ ಸಲುವಾಗಿ ಈ ಆಪರೇಷನ್ ಮಾಡಿದ್ದಾರೆ.  ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರವೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕಾದ ಮೇರಿಲ್ಯಾಂಡ್ ಆಸ್ಪತ್ರೆ ವೈದ್ಯರು ಸೋಮವಾರ ಹೇಳಿದ್ದಾರೆ.

57 ವರ್ಷದ ಡೇವಿಡ್ ಬೆನೆಟ್ ಗೆ ಹಂದಿಯ ಹೃದಯ ಕಸಿ ಮಾಡಲಾಗಿದೆ. ಅವರು ಹೃದ್ರೋಗದಿಂದ ಬಳಲುತ್ತಿದ್ದು, ಸಾವಿನ ದವಡೆಯಲ್ಲಿದ್ದರು. “ ಈ ಪ್ರಯೋಗ ಯಶ್ಸಸ್ವಿಯಾಗುವ ಯಾವುದೇ ಖಾತರಿ ಇರಲಿಲ್ಲ. ಅವರು ಬದುಕುಳಿಯು ಸಾಧ್ಯತೆ ಕಡಿಮೆ ಇದ್ದದ್ದರಿಂದ ಈ ಕಸಿ ಮಾಡದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಅವರ ಪುತ್ರ ಮಾಧ್ಯಮಗಳಿಗೆ ಹೇಳಿದ್ದಾನೆ.

 ಈ ಆಪರೇಷನ್ ನಿಜವಾಗಿಯೂ ಯಶಸ್ವಿಯಾಗಿದೆಯಾ  ಎಂದು ತಿಳಿದುಕೊಳ್ಳಲು ಇದು ತುಂಬಾ ಬೇಗ ಆಗಿದ್ದರೂ, ಜೀವ ಉಳಿಸುವ ಸಲುವಾಗಿ ಪ್ರಾಣಿಗಳ ಅಂಗಗಳನ್ನು ಕಸಿ ಮಾಡುವ   ದಶಕಗಳ ಅನ್ವೇಷಣೆಯಲ್ಲಿ ಇದು  ಪ್ರಥಮ ಹೆಜ್ಜೆ ಇಟ್ಟಿದೆ.

ಕಸಿ ಮಾಡಲು ಮಾನವ ಅಂಗಗಳ ದೊಡ್ಡ ಕೊರತೆಯಿದೆ, ಬದಲಿಗೆ ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಎಂದು ಕಂಡುಹಿಡಿಯಲು ವಿಜ್ಞಾನಿಗಳಿಗೆ ಈ ಪ್ರಯೋಗ ಪ್ರೇರೇಪಿಸುತ್ತದೆ.

ಶ್ರೀ ಸಿದ್ದೇಶ್ವರ ಸ್ವಾಮಿಜಿಗಳಿಗೆ ಕಾಲು ಜಾರಿ ಗಂಭೀರ ಗಾಯ –  ಪ್ರವಚನದ ವೇಳೆ ಅವಘಡ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd