ಯುವಕನ ಪ್ರಜ್ಞೆ ತಪ್ಪಿಸಿ ಖಾಸಗಿ ಅಂಗ ಕಟ್ ಮಾಡಿದ ಯುವತಿ
ಯುವತಿಯೊಬ್ಬಳು ಊಟದಲ್ಲಿ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿ ಸ್ನೇಹಿತ ಮರ್ಮಾಂಗವನ್ನೆ ಕತ್ತರಿಸಿರುವ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ. ಜೈಪುರದ ಯೊಗ ಶಿಕ್ಷಕಿಯೊಬ್ಬಳು ಚಾಕುವಿನಿಂದ ಯುವಕನ ಖಾಸಗಿ ಅಂಗವನ್ನೆ ಕತ್ತರಿಸಿದ್ದು ಯುವಕ ಚಿಂತಾಜನಕ ಸ್ಥಿಯಲ್ಲಿದ್ದಾನೆ.
28 ವರ್ಷದ ಯುವಕ ಮತ್ತು ರೀಮಾ ಎನ್ನುವ 35 ವರ್ಷದ ಯುವತಿಒಂದೇ ಕಡೆಯಲ್ಲಿ ಯೋಗದ ಬಗ್ಗೆ ತರಬೇತಿ ಪಡೆಯುತ್ತಿದ್ದರು… ಪರಿಚಯ ಗಾಢವಾದ ಬಳಿಕ ಪದೇ ಪದೇ ಬೇಟಿಯಾಗುತ್ತಿದ್ದರು. ಯುವಕನನ್ನ ಊಟಕ್ಕೆಂದು ಕರೆದಿದ್ದ ಯುವತಿ ಅಮಲು ಪದಾರ್ಥ ಸೇರಿಸಿ ಊಟ ಮಾಡಿಸಿದ್ದಾಳೆ ,ಊಟದ ನಂತರ ತನ್ನ ಮನೆಗೆ ವಾಪಸ್ ಬಂದ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ನಂತರ ಯುವಕನ ಮನೆಗೆ ಬಂದ ರೀಮ ಚಾಕುವಿನಿಂದ ಆತನ ಖಾಸಗಿ ಆಂಗವನ್ನ ಕತ್ತರಿಸಿದ್ದಾಳೆ.
ಪ್ರಜ್ಞೆ ಬಂದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವ ನೋವು ತಾಳಲಾರದೆ ಮತ್ತೆ ರೀಮಾ ಎನ್ನುವ ಯುವತಿಗೆ ಕರೆ ಮಾಡಿದ್ದಾನೆ…ವಾಪಸ್ ಬಂದ ಯುವತಿ ಆತನನ್ನ ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ಯುವತಿಗಾಗಿ ಬಲೆ ಬೀಸಿದ್ದಾರೆ. ಯುವತಿ ಸಿಕ್ಕಿಬಿದ್ದ ಬಳಿಕವೇ ಘಟನೆಗೆ ಕಾರಣ ತಿಳಿದುಬರಲಿದೆ.