ಹಲ್ಲು ನೋವಿನಿಂದ ಪತ್ತೆಯಾಯ್ತು ಒಮಿಕ್ರಾನ್ ಸೋಂಕು
ಭಾರತದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರವು ಅತಿ ಹೆಚ್ಚು ಸೋಂಕುಗಳನ್ನು(18) ದಾಖಲಾಗಿದೆ . ರಾಜ್ಯದ ಪಿಂಪ್ರಿ-ಚಿಂಚ್ವಾಡ್ ಜಿಲ್ಲೆಯಲ್ಲಿ, ನೈಜೀರಿಯಾದಿಂದ ಹಿಂದಿರುಗಿದ 12 ವರ್ಷದ ಬಾಲಕಿಗೆ ಓಮಿಕ್ರಾನ್ ರೂಪಾಂತರ ಕಾಣಿಸಿಕೊಂಡಿದೆ.
ಆ ಬಾಲಕಿಗೆ ಹಲ್ಲು ನೋವು ಹೆಚ್ಚಾಗಿದ್ದು ಚಿಕಿತ್ಸೆಗೆಂದು ಹೋದಾಗ ಬಾಲಕಿಯನ್ನು ಪರೀಕ್ಷಿಸುವ ಮೊದಲು ದಂತವೈದ್ಯರು ಆರ್ಟಿ-ಪಿಸಿಆರ್ ಋಣಾತ್ಮಕ ಪ್ರಮಾಣಪತ್ರವನ್ನು ಒತ್ತಾಯಿಸಿದ ನಂತರ ಸೋಂಕು ಇರುವುದು ಬೆಳಕಿಗೆ ಬಂದಿದೆ.
12 ವರ್ಷದ ಬಾಲಕಿ ನೈಜೀರಿಯಾದಿಂದ ಪಿಂಪ್ರಿ ಚಿಂಚ್ವಾಡ್ಗೆ ಹಿಂದಿರುಗಿದ ಕೆಲವು ದಿನಗಳ ನಂತರ ಆಕೆಗೆ ಹಲ್ಲುನೋವು ಕಾಣಿಸಿಕೊಂಡಿತು. ಇಲ್ಲಿ ಕೊವಿಡ್ ಸೋಂಕು ಇರುವುದು ದೃಢಪಟ್ಟಿದ್ದು ನಂತರ ಅವಳ ಮತ್ತು ಕುಟುಂಬದ ಇತರ ಐವರಲ್ಲಿ ಅದರ ಒಮಿಕ್ರಾನ್ ರೂಪಾಂತರವನ್ನು ಪತ್ತೆ ಹಚ್ಚಲಾಗಿದೆ. ನಂತರ ಕುಟುಂಬದವರು ಟೆಸ್ಟ್ ಮಾಡಿಸಿದಾಗ ಆಕೆಯ ಆರ್ಟಿ-ಪಿಸಿಆರ್ ವರದಿಯು ಆಕೆ ಕೋವಿಡ್ಗೆ ತುತ್ತಾಗಿರುವುದನ್ನು ಬಹಿರಂಗಪಡಿಸಿದೆ