ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ವತಿಯಿಂದ ಅಥಣಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೊವೆಲ್ ಕೊರೊನಾ ವೈರಸ್ ಸುರಕ್ಷತಾ ಕ್ರಮಕ್ಕಾಗಿ ಅಟೋ ಸ್ಯಾನಿಟೈಜ್ ಸ್ಪ್ರೇ ಘಟಕದ ಉದ್ಘಾಟನೆಯನ್ನು ಡಿಸಿಎಮ್ ಲಕ್ಷ್ಮಣ ಸವದಿ ಅವರು ನೆರವೇರಿಸಿದರು.
ಬಹುತೇಕ ಬಡವರು ಮತ್ತು ನಿರ್ಗತಿಕರು ಬರುವ ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಗೆ ಉಚಿತವಾಗಿ ಸ್ಯಾನಿಟೈಜ್ ಮಾಡುವ ಮೂಲಕ ಆರೋಗ್ಯ ಕಾಪಾಡಲು ಮುಂದಾಗಿದ್ದು ಉತ್ತಮ ಕೆಲಸವಾಗಿದೆ.ಅಷ್ಟೆ ಅಲ್ಲದೆ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯ ಶ್ರಮ ಅವಿಸ್ಮರಣೀಯ ವಾದುದು ಎಂದು ಡಿ ಸಿಎಮ್ ಲಕ್ಷ್ಮಣ ಸವದಿ ಹೇಳಿದರು.
ಯು ಎಸ್ ಟೆಕ್ನಾಲಜಿ ಸಾಂಗ್ಲಿ ಬಾಹುಬಲಿ ಐನಾಪೂರೆ,ಚಂದನ ರತ್ತು ಮತ್ತು ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರದ ಸಹಭಾಗಿತ್ವದಲ್ಲಿ ಘಟಕ ಸ್ಥಾಪನೆ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುಬೇಕು ಎಂದು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಪ್ರದೀಪ ನಂದಗಾಂವ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ ಸುಶೀಲ ಪತ್ತಾರ,ಎ ಎಮ್ ಖೊಬ್ರೀ,ಶಿವಾನಂದ ಸವದಿ,ಸಂಗಮೇಶ್ ಪಲ್ಲಕ್ಕಿ,ಆಸಿಪ್ ತಾಂಬೊಳಿ,ಶ್ರೀಶೈಲ ಹಾವರೆಡ್ಡಿ,ಪೂಜಾ ನಂದಗಾಂವ, ಸೇರಿದಂತೆ ಹಲವರು ಉಪಸ್ಥಿತರಿದ್ದರು







