ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಓಟ ತೀವ್ರಗೊಂಡಿದೆ. ನಿನ್ನೆ 196 ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, ಇಂದು 126 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1398ಕ್ಕೆ ಏರಿದೆ.
ನಗರದಲ್ಲಿ ಇಂದು ಮಹಾಮಾರಿಗೆ ಕೊರೊನಾಗೆ ಮೂವರು ಬಲಿಯಾಗಿದ್ದು, ರಾಮನಗರ ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬರು ಸಾವನಪ್ಪಿದ್ದಾರೆ.
ರಾಜ್ಯಾದ್ಯಂತ ಇಂದು 249 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಮೃತಪಟ್ಟವರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ನಂತರ ಕಲಬುರಗಿ 27, ವಿಜಯಪುರ 15, ಉಡುಪಿ 14, ದಕ್ಷಿಣ ಕನ್ನಡ 12, ದಾವಣಗೆರೆ 9, ಉತ್ತರ ಕನ್ನಡ 6 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ಪ್ರದೇಶಗಳನ್ನು ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡಿದೆ.
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರವನ್ನು ನಿತ್ಯ 21 ಬಾರಿ ಪಠಿಸಿ ಚಮತ್ಕಾರ ನೋಡಿ
ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಮಂತ್ರವನ್ನು ನಿತ್ಯ 21 ಬಾರಿ ಪಠಿಸಿ ಚಮತ್ಕಾರ ನೋಡಿ ಪ್ರತಿರಾತ್ರಿ ಮಲಗುವ ಮುನ್ನ ಈ ಒಂದು...