ದೇಶದಲ್ಲಿ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ವಾರ್ಷಿಕವಾಗಿ 1 ಕೋಟಿಗಿಂತ ಹೆಚ್ಚು ಆದಾಯ ಗಳಿಸುವ ವ್ಯಕ್ತಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ (Minister of State for Finance Pankaj Chaudhary) ಸಂಸತ್ತಿನಲ್ಲಿ ಈ ಮಾಹಿತಿ ಬಹಿರಂಗ ಪಡಿಸಿದ್ದು, ಡಿಸೆಂಬರ್ 31, 2023 ರಂತೆ 2023-24 ರ ಮೌಲ್ಯಮಾಪನ ವರ್ಷಕ್ಕೆ (Assessment Year 2023-24) ಈ ಸಂಖ್ಯೆ 2.16 ಲಕ್ಷಕ್ಕೆ ಏರಿಕೆ ಕಂಡಿದೆ. 1 ಕೋಟಿ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.
2023-24 ರ ಮೌಲ್ಯಮಾಪನ ವರ್ಷಕ್ಕೆ 1 ಕೋಟಿ ರೂ. ಮೀರಿದ ಆದಾಯ ಹೊಂದಿರುವ ವ್ಯಕ್ತಿಗಳು ಸಲ್ಲಿಸಿದ ಐಟಿಆರ್‌ಗಳ ಸಂಖ್ಯೆ ಡಿಸೆಂಬರ್ 31, 2023ಕ್ಕೆ 2.16 ಲಕ್ಷ ತಲುಪಿದೆ. ಈ ಸಂಖ್ಯೆ 2022-23ರಲ್ಲಿ 10,528 ರಿಂದ 12,218ಕ್ಕೆ ಏರಿಕೆ ಕಂಡಿತ್ತು. ಆನಂತರ ವರ್ಷದಿಂದ ವರ್ಷಕ್ಕೆ ವಿಪರೀತ ಹೆಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ.