ಕಲಬುರಗಿ : ತೊಗರಿ ನಾಡು ಕಲಬುರಗಿಯಲ್ಲಿ ಕೊರೊನಾಸುರ ಇಂದು ನರ್ತನ ಮಾಡಿದ್ದಾನೆ. ತನ್ನ ಕದಂಬ ಬಾಹುಗಳನ್ನು ಚಾಚುವ ಮೂಲಕ 28 ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಒಂದೇ ದಿನಕ್ಕೆ ಕಲಬುರಗಿಯಲ್ಲಿ ನಾಲ್ಕು ವರ್ಷದ ಬಾಲಕಿ ಸೇರಿ 28 ಜನರಿಗೆ ಕೊರೋನಾ ಪಾಸಿಟಿವ್ ಕೇಸಸ್ ಪತ್ತೆಯಾಗಿದೆ. ಅಲ್ಲದೆ ಕಲಬುರಗಿ ಜಿಲ್ಲೆಗೆ ಮಹಾರಾಷ್ಟ್ರ ಶಾಪವಾಗಿದೆ. ಮುಂಬೈಯಿಂದ ಬಂದಿರುವ 28 ಜನರಿಗೂ ಕೊರೊನಾ ಸೋಂಕು ದೃಡವಾಗಿದೆ. ಆದ್ದರಿಂದ ಕಲಬುರಗಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರದ ಮುಂಬೈನಿಂದ ವಲಸೆ ಬಂದಿರುವ ಕಾರ್ಮಿಕರಲ್ಲಿ ಸೋಂಕು ಕಂಡು ಬಂದಿದೆ. ಇವರು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದರು. ಇದೀಗ ಸೋಂಕು ಪತ್ತೆಯಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 185 ಕ್ಕೆ ಏರಿದೆ.
ಕಲಬುರಗಿಯಲ್ಲಿ 28 ಕೊರೋನಾ ಕೇಸ್ ಪತ್ತೆ
P: 2338 22 ವರ್ಷದ ಯುವಕ
P: 2339 49 ವರ್ಷದ ಪುರುಷ
P: 2340 55 ವರ್ಷದ ಮಹಿಳೆ
P: 2344 38 ವರ್ಷದ ಪುರುಷ
P: 2345 17 ವರ್ಷದ ಯುವತಿ
P: 2346 13 ವರ್ಷದ ಬಾಲಕ
P: 2347 18 ವರ್ಷದ ಯುವತಿ
P: 2348 50 ವರ್ಷದ ವೃದ್ದ
P:2349 40 ವರ್ಷದ ಪುರುಷ
P:2350 35 ವರ್ಷದ ಮಹಿಳೆ
P:2351 17 ವರ್ಷದ ಯುವಕ
P: 2352 10 ವರ್ಷದ ಬಾಲಕ
P:2353 34 ವರ್ಷದ ಪುರುಷ
P:2354 34 ವರ್ಷದ ಪುರುಷ
P:2355 7 ವರ್ಷದ ಬಾಲಕಿ
P:2356 4 ವರ್ಷದ ಬಾಲಕಿ
P: 2357 41 ವರ್ಷದ ಪುರುಷ
P:2358 20 ವರ್ಷದ ಯುವಕ
P: 2359 36 ವರ್ಷದ ಪುರುಷ
P:2360 23 ವರ್ಷದ ಯುವಕ
P: 2361 16 ವರ್ಷದ ಯುವಕ
P: 2362 22 ವರ್ಷದ ಯುವಕ
P: 2363 27 ವರ್ಷದ ಯುವಕ
P: 2364 11 ವರ್ಷದ ಬಾಲಕಿ
P:2365 7 ವರ್ಷದ ಬಾಲಕ
P:2366 26 ವರ್ಷದ ಯುವಕ
P: 2367 40 ವರ್ಷದ ಪುರುಷ
P: 2368 36 ವರ್ಷದ ಪುರುಷ








