ಸಂಭ್ರಮದ ಮಧ್ಯೆ ಇರಲಿ ಎಚ್ಚರ.. ಹೆಚ್ಚುತ್ತಿದೆ ಓಮಿಕ್ರಾನ್ ಸೋಂಕು Omicron saaksha tv
ಬೆಂಗಳೂರು : ರಾಜ್ಯದಲ್ಲಿ ಹೊಸ ವರ್ಷ ಆಚರಣೆ ಬೆನ್ನಲ್ಲೆ ಓಮಿಕ್ರಾನ್ ಸೋಂಕಿನ ಆತಂಕವೂ ಹೆಚ್ಚಾಗುತ್ತಿದೆ.
ಕರ್ನಾಟಕದಲ್ಲಿ ನಿನ್ನೇ ಒಂದೇ ದಿನ 23 ಹೊಸ ಓಮಿಕ್ರಾನ್ ಸೋಂಕು ಕೇಸ್ ಗಳು ಪತ್ತೆಯಾಗಿವೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಓಮಿಕ್ರಾನ್ ಕೇಸ್‌ಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮಾಡುವ ಮೂಲಕ ಈ ವಿಚಾರ ದೃಢಪಡಿಸಿದ್ದಾರೆ.
ಶುಕ್ರವಾರ ಪತ್ತೆಯಾಗಿರುವ ಹೊಸ 23 ಕೇಸ್ ಗಳ ಪೈಕಿ 19 ಮಂದಿ ಅಂತರಾಷ್ಟ್ರೀಯ ಇತಿಹಾಸ ಹೊಂದಿದ್ದಾರೆ.
ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಇನ್ನುಳಿದ 4 ಪ್ರಕರಣಗಳು ರಾಜ್ಯದಲ್ಲೇ ಪತ್ತೆಯಾಗಿವೆ.