ಬೆಂಗಳೂರು : ರಾಜ್ಯದಲ್ಲಿ ಇನ್ನೂ ಬೇಸಿಗೆಯ ಸೂರ್ಯನ ಶೆಖೆ ಮುಗಿದಿಲ್ಲ. ಇದರ ಮಧ್ಯೆಯೇ ಪವರ್ ಕಟ್ (Power Cut in Bangalore) ಮಾಡುವ ಮೂಲಕ ಬೆಸ್ಕಾಂ (BESCOM) ಬೆಂಗಳೂರಿಗರ ಆಕ್ರೋಶಕ್ಕೆ ಗುರಿಯಾಗುತ್ತಿದೆ.
ವಿದ್ಯುತ್ ಕಡಿತದ ಕುರಿತು ನೆಟ್ಟಿಗರು ಟ್ವೀಟರ್ ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಟ್ಯಾಗ್ ಮಾಡಿ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜೆ.ಪಿ.ನಗರ 8ನೇ ಹಂತದ ನಿವಾಸಿ ದಿಲೀಪ್ ಜೈನ್ ಟ್ವೀಟ್ ಮಾಡಿ, ಏಳು ಗಂಟೆಗಳಲ್ಲಿ ಐದು ಬಾರಿ ವಿದ್ಯುತ್ ಕಡಿತವಾಗಿದೆ. ಹಲೋ ಬೆಸ್ಕಾಂ ದಯವಿಟ್ಟು ಏನಾದರೂ ಮಾಡಿ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಸುರೇಶ್ ಎಂಬ ವ್ಯಕ್ತಿ ಬಿಎಸ್‌ಕೆ 2 ನೇ ಹಂತದ ಪ್ರದೇಶದಲ್ಲಿ ಹಲವಾರು ಗಂಟೆಗಳಿಂದ ಕರೆಂಟ್ ಇಲ್ಲ. ಇದಕ್ಕೆ ಕಾರಣವೇನು? ದಯವಿಟ್ಟು ತಿಳಿಸಿ” ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಈಗಾಗಲೇ ಘೋಷಿಸಿತ್ತು. ಈ ಯೋಜನೆಯ ಲಾಭ ಮಾಡಿಕೊಳ್ಳಲು ಮುಂದಾಗಿರುವ ಮಧ್ಯೆಯೇ ಬೆಸ್ಕಾಂ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದೆ. ಬೆಂಗಳೂರಿನ ಹಲವಾರು ನಗರ, ಬಡಾವಣೆಗಳಲ್ಲಿ ವಿದ್ಯುತ್ ಇಲ್ಲದಂತಾಗಿದ್ದು, ಬೇಸಿಗೆಯ ಈ ಕಾಲದಲ್ಲಿ ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.








