Ind – Pak – ಮರುಕಳಿಸುತ್ತಾ 2007 ಟಿ 20 ವಿಶ್ವಕಪ್.. ಫೈನಲ್ ಗೆ ಭಾರತ – ಪಾಕಿಸ್ತಾನ
ಟಿ 20 ವಿಶ್ವಕಪ್ ನಲ್ಲಿ ಯಾವಾಗ ಏನು ನಡೆಯುತ್ತದೆ ಅಂತಾ ಅಂದಾಜಿಸೋದು ಕಷ್ಟ ಆಗಿದೆ.
ಎಲ್ಲಾ ದಾರಿಗಳು ಮುಚ್ಚಿವೆ ಎನ್ನುವಷ್ಟರಲ್ಲಿ ಪಾಕಿಸ್ತಾನ ತಂಡ ಯಾರೂ ಊಹಿಸದ ರೀತಿಯಲ್ಲಿ ಸೌಥ್ ಆಫ್ರಿಕಾ, ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿ ಸೆಮೀಸ್ ಪ್ರವೇಶಿಸಿದೆ.
ಇದರೊಂದಿಗೆ ಪಾಕಿಸ್ತಾನಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅಲ್ಲದೇ ಈ ಸೆಮೀಸ್ ನಲ್ಲಿ ಭಾರತ – ಪಾಕಿಸ್ತಾನ ತಂಡಗಳು ಗೆದ್ದರೇ 2007ರ ಸೀನ್ ರಿಪೀಟ್ ಆಗಲಿದೆ ಎನ್ನುತ್ತಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕೂಡ ಭಾರತ – ಪಾಕಿಸ್ತಾನ ತಂಡಗಳು ಫೈನಲ್ ಗೆ ಬರಲಿ ಎಂದು ಆಶಿಸಿದ್ದಾರೆ.

ಅಂದಹಾಗೆ ಸೆಮೀಸ್ ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ, ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಮುಖಾಮುಖಾಯಾಗಲಿವೆ.
ಸದ್ಯದ ಟ್ರೆಂಡ್ ಪ್ರಕಾರ ಸೂಪರ್ ಫಾರ್ಮ್ ನಲ್ಲಿರುವ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಬೇಕೆಂದರೇ ಸಾಕಷ್ಟು ಶ್ರಮಪಡಬೇಕಾಗಿದೆ.
ಇತ್ತ ಪಾಕಿಸ್ತಾನ ಕೂಡ ಭೀಕರ ಫಾರ್ಮ್ ನಲ್ಲಿರುವ ನ್ಯೂಜಿಲೆಂಡ್ ವಿರುದ್ಧ ಗೆಲ್ಲೋದು ಕಷ್ಟ ಎಂದು ಹೇಳಲಾಗುತ್ತಿದೆ. ಆದ್ರೆ ಟಿ 20 ಕ್ರಿಕೆಟ್ ನಲ್ಲಿ ಯಾವುದೂ ಅಸಾಧ್ಯವಲ್ಲ..








