IND v AUS 1st Test : ಟೆಸ್ಟ್ನಲ್ಲಿ 25ನೇ ಸಿಕ್ಸ್ ಬಾರಿಸಿ ಕೊಹ್ಲಿ ಹಿಂದಿಕ್ಕಿದ ಶಮಿ
ಟೀಂ ಇಂಡಿಯಾದ ವೇಗದ ಬೌಲಿಂಗ್ ಅಸ್ತ್ರವಾಗಿರುವ ಮೊಹಮ್ಮದ್ ಶಮಿ, ಟೆಸ್ಟ್ ಕ್ರಿಕೆಟ್ನಲ್ಲಿ ಸಿಕ್ಸರ್ ಸಿಡಿಸುವುದರಲ್ಲಿ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳನ್ನೇ ಹಿಂದಿಕ್ಕಿದ್ದಾರೆ.
ನಾಗ್ಪುರ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಶಮಿ, ಬಿರುಸಿನ ಆಟವಾಡಿದರು. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ಶಮಿ, ಆಸೀಸ್ ಬೌಲರ್ಗಳ ಬೆವರಿಳಿಸಿದರು.
ಕೇವಲ 47 ಬಾಲ್ಗಳಲ್ಲಿ 37 ರನ್ಗಳಿಸಿದ ಶಮಿ, ತಂಡದ ಮೊತ್ತವನ್ನ 400ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊಹಮ್ಮದ್ ಶಮಿ ಅವರ ಈ ಇನ್ನಿಂಗ್ಸ್ನಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಅಲ್ಲದೇ ಅಕ್ಸರ್ ಪಟೇಲ್ ಜೊತೆಗೂಡಿ 9ನೇ ವಿಕೆಟ್ಗೆ 52 ರನ್ಗಳ ಉಪಯುಕ್ತ ಜೊತೆಯಾಟದಲ್ಲೂ ಮೊಹಮ್ಮದ್ ಶಮಿ ಸಾಥ್ ನೀಡಿ ಮಿಂಚಿದರು.
ತಮ್ಮ ಇನ್ನಿಂಗ್ಸ್ನಲ್ಲಿ 3 ಸಿಕ್ಸರ್ ಸಿಡಿಸಿದ ಮೊಹಮ್ಮದ್ ಶಮಿ, ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ಪಡೆದರಲ್ಲದೇ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳನ್ನೇ ಹಿಂದಿಕ್ಕಿದರು.
ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ 3 ಸಿಕ್ಸ್ನೊಂದಿಗೆ ಮೊಹಮ್ಮದ್ ಶಮಿ, ಟೆಸ್ಟ್ನಲ್ಲಿ 25ನೇ ಸಿಕ್ಸರ್ ದಾಖಲಿಸಿದರು. ಸದ್ಯ ಟೆಸ್ಟ್ನಲ್ಲಿ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್ಮನ್ಗಳ ಲಿಸ್ಟ್ನಲ್ಲಿ ಶಮಿ ಮೊದಲ ಸ್ಥಾನದಲ್ಲಿದ್ದಾರೆ.
ಉಳಿದಂತೆ ವಿರಾಟ್ ಕೊಹ್ಲಿ(24), ರವಿಶಾಸ್ತ್ರಿ(22), ಯುವರಾಜ್ ಸಿಂಗ್(22), ಇರ್ಫಾನ್ ಪಠಾಣ್(18), ಕೆಎಲ್ ರಾಹುಲ್(17), ಚೇತೇಶ್ವರ್ ಪುಜಾರ(15) ಹಾಗೂ ಶಿಖರ್ ಧವನ್(12) ಟೆಸ್ಟ್ನಲ್ಲಿ ಅಧಿಕ ಸಿಕ್ಸ್ ಬಾರಿಸಿದ ಭಾರತದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
IND v AUS 1st Test , mohammad shami , virat kohli








