ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆಯುವ ರೋಚಕ ಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಸಜ್ಜಾಗಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಕಿಂಗ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅಹ್ಮದಾಬಾನದ್ ಅಂಗಳದಲ್ಲಿ ಚೇಸ್ ಮಾಸ್ಟರ್ ಕೊಹ್ಲಿಯ ಬ್ಯಾಟಿಂಗ್ ದಾಖಲೆ ಅಷ್ಟೇನು ಉತ್ತಮವಾಗಿಲ್ಲ.
ಭಾರತ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವ ರನ್ ಮಷಿನ್ ಕೊಹ್ಲಿ, ಅಹ್ಮದಾಬಾದ್ ಅಂಗಳದಲ್ಲಿ 2010ರಿಂದ ಈವರೆಗೂ ಎಂಟು ಏಕದಿನ ಪಂದ್ಯಗಳನ್ನ ಆಡಿದ್ದು, 24ರ ಸರಾಸರಿ, 82.75ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 192 ರನ್‌ಗಳನ್ನ ಕಲೆಹಾಕಿದ್ದಾರೆ. ಇದರಲ್ಲಿ ಕೊಹ್ಲಿ ಏಕೈಕ ಅರ್ಧಶತಕವನ್ನ ಮಾತ್ರ ಬಾರಿಸಿದ್ದು, 2010ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಬಾರಿಸಿದ 57 ರನ್‌ಗಳು, ಕೊಹ್ಲಿಯ ಗರಿಷ್ಠ ಸ್ಕೋರ್ ಆಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.
ಬಹುನಿರೀಕ್ಷಿತ ವಿಶ್ವಕಪ್ ಫೈನಲ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿರುವ ಕಿಂಗ್ ಕೊಹ್ಲಿ, ಇದಕ್ಕಾಗಿ ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ ಕಿಂಗ್ ಕೊಹ್ಲಿ, ಆಡಿರುವ 10 ಪಂದ್ಯದಲ್ಲಿ 711 ರನ್‌ಗಳನ್ನ ಕಲೆಹಾಕಿದ್ದು, ಇದರಲ್ಲಿ ಮೂರು ಶತಕಗಳು ಹಾಗೂ ಐದು ಅರ್ಧಶತಕಗಳು ಒಳಗೊಂಡಿದೆ.
IND v AUS, Team India, Australia, Virat Kohli, World Cup Final