ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಏಕದಿನ ವಿಶ್ವಕಪ್ ಟೂರ್ನಿಯ ಒಂದು ಆವೃತ್ತಿಯಲ್ಲಿ ಹೆಚ್ಚು ರನ್ಗಳಿಸುವ ಮೂಲಕ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದಿದ್ದಾರೆ.
ಪ್ರಸಕ್ತ ವಿಶ್ವಕಪ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಮುಂಬೈನಲ್ಲಿ ನಡೆದ ನ್ಯೂಜಿ಼ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲೂ ತಮ್ಮ ಬ್ಯಾಟಿಂಗ್ ಲಯವನ್ನ ಮುಂದುವರಿಸಿದರು. ಕಿವೀಸ್ ಬೌಲರ್ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಚೇಸ್ ಮಾಸ್ಟರ್ ಕೊಹ್ಲಿ, ಪ್ರಸಕ್ತ ವಿಶ್ವಕಪ್ನಲ್ಲಿ ವೈಯಕ್ತಿಕ 674* ರನ್ಗಳಿಸುವ ಮೂಲಕ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ 20 ವರ್ಷಗಳ ಹಿಂದಿನ ದಾಖಲೆಯನ್ನ ಮುರಿಯುವಲ್ಲಿ ಯಶಸ್ವಿಯಾದರು.
ಈ ಹಿಂದೆ 2003ರ ಏಕದಿನ ವಿಶ್ವಕಪ್ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ವೈಯಕ್ತಿಕ 673 ರನ್ಗಳಿಸಿ ಮಿಂಚಿದ್ದರು. ಇದು ಏಕದಿನ ವಿಶ್ವಕಪ್ನ ಒಂದು ಆವೃತ್ತಿಯಲ್ಲಿ ಓರ್ವ ಬ್ಯಾಟ್ಸ್ಮನ್ ಕಲೆಹಾಕಿದ್ದ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಈ ಬಾರಿಯ ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕಿಂಗ್ ಕೊಹ್ಲಿ, 674* ರನ್ಗಳಿಸುವ ಮೂಲಕ ಸಚಿನ್ ದಾಖಲೆ ಮುರಿದಿದ್ದಾರೆ.
ಇದೇ ಆವೃತ್ತಿಯಲ್ಲಿ ಏಕದಿನ ಕ್ರಿಕೆಟ್ನಲ್ಲಿ ತಮ್ಮ 49ನೇ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಶತಕಗಳನ್ನ ಬಾರಿಸಿದ್ದ ಸಚಿನ್ ತೆಂಡುಲ್ಕರ್(49 ಶತಕ) ಅವರ ದಾಖಲೆಯನ್ನ ಸರಿಗಟ್ಟಿದ್ದರು. ಇದೀಗ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ಗಳಿಸಿದ ದಾಖಲೆಯನ್ನ ಸಹ ಹಿಂದಿಕ್ಕುವಲ್ಲಿ ಕೂಡ “ಚೇಸ್ ಮಾಸ್ಟರ್” ಕೊಹ್ಲಿ ಯಶಸ್ಸು ಕಂಡಿದ್ದಾರೆ.
IND v NZ, Virat Kohli, Team India, Sachin Tendulkar, ODI World Cup