ADVERTISEMENT
Tuesday, February 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v PAK: ರೋಹಿತ್‌ ಅಬ್ಬರ, ಬೌಲರ್‌ಗಳ ಚಾಣಾಕ್ಷ ಆಟ: ಭಾರತಕ್ಕೆ ಶರಣಾದ ಪಾಕಿಸ್ತಾನ

ಹ್ಯಾಟ್ರಿಕ್‌ ಜಯದೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ ರೋಹಿತ್‌ ಪಡೆ

C Dinesh by C Dinesh
October 14, 2023
in Sports, ಕ್ರಿಕೆಟ್ ವಿಶ್ವಕಪ್ 2023
Team India

Team India

Share on FacebookShare on TwitterShare on WhatsappShare on Telegram

ಬೌಲರ್‌ಗಳ ಆಕ್ರಮಣಕಾರಿ ದಾಳಿ ಹಾಗೂ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಏಕದಿನ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್‌ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿತು. ಪರಿಣಾಮ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು. ಈ ಟಾರ್ಗೆಟ್‌ ಚೇಸ್‌ ಮಾಡಿದ ಭಾರತ 30.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗೆ 192 ರನ್‌ಗಳಿಸಿ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಮೂರನೇ ಗೆಲುವು ದಾಖಲಿಸಿತು.

Babar & Rizwan

ಬಾಬರ್‌-ರಿಜ್ವಾನ್‌ ಆಸರೆ:
ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಭಾರತಕ್ಕೆ ಬೌಲರ್‌ಗಳು ಆಸರೆಯಾದರು. ಮೊದಲು ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಶಫೀಕ್‌(20) ಹಾಗೂ ಇಮಾಮ್‌(36) ಮೊದಲ ವಿಕೆಟ್‌ಗೆ 41 ರನ್‌ಗಳ ಸಾಧಾರಣ ಆರಂಭ ನೀಡಿದರು. ಬಳಿಕ 3ನೇ ವಿಕೆಟ್‌ಗೆ ನಾಯಕ ಬಾಬರ್‌ ಆಜ಼ಂ(50) ಹಾಗೂ ವಿಕೆಟ್‌-ಕೀಪರ್‌ ಮೊಹಮ್ಮದ್‌ ರಿಜ್ವಾನ್‌(49) 82 ರನ್‌ಗಳ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
Jasprit Bumrah

ಭಾರತದ ಮಿಂಚಿನ ದಾಳಿ:
ಒಂದು ಹಂತದಲ್ಲಿ ಕೇವಲ 2 ವಿಕೆಟ್‌ಗೆ 155 ರನ್‌ಗಳಿಸಿದ್ದ ಪಾಕಿಸ್ತಾನ ಬೃಹತ್‌ ಮೊತ್ತ ಕಲೆಹಾಕುವ ನಿರೀಕ್ಷೆ ಹೊಂದಿತ್ತು. ಆದರೆ ಇನ್ನಿಂಗ್ಸ್‌ನ 30ನೇ ಓವರ್‌ನಲ್ಲಿ ಬಾಬರ್‌ ಆಜ಼ಂ(50) ಅವರಿಗೆ ಪೆವಿಲಿಯನ್‌ ದಾರಿ ತೋರಿಸಿದ ಮೊಹಮ್ಮದ್‌ ಸಿರಾಜ್‌, ಪಾಕಿಸ್ತಾನದ ಬ್ಯಾಟಿಂಗ್‌ ವೈಫಲ್ಯಕ್ಕೆ ಮುನ್ನುಡಿ ಬರೆದರು. ಪರಿಣಾಮ ಬಾಬರ್‌ ಆಜ಼ಂ ನಂತರ ಕಣಕ್ಕಿಳಿದ ಯಾವುದೇ ಬ್ಯಾಟರ್‌ಗಳು ಜವಾಬ್ದಾರಿಯ ಆಟವಾಡಲಿಲ್ಲ. ಹೀಗಾಗಿ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಪಾಕಿಸ್ತಾನ ಆಲೌಟ್‌ ಆಯಿತು. ಭಾರತದ ಪರ ಬುಮ್ರಾ, ಸಿರಾಜ್‌, ಹಾರ್ದಿಕ್‌, ಜಡೇಜಾ ಹಾಗೂ ಕುಲ್ದೀಪ್‌ ತಲಾ 2 ವಿಕೆಟ್‌ಗಳನ್ನ ಪಡೆದು ಪಾಕಿಸ್ತಾನದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.
Rohit Sharma

ರೋಹಿತ್‌ ಅಬ್ಬರದ ಆಟ:
ಪಾಕಿಸ್ತಾನ ನೀಡಿದ 192 ರನ್‌ಗಳ ಸಾಧಾರಣ ಟಾರ್ಗೆಟ್‌ ಬೆನ್ನತ್ತಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್‌ ಗಿಲ್‌(16) ಬಹುಬೇಗನೆ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ವಿರಾಟ್‌ ಕೊಹ್ಲಿ(16) ಸಹ ದೊಡ್ಡ ಇನ್ನಿಂಗ್ಸ್‌ ಆಡುವಲ್ಲಿ ಎಡವಿದರು. ಆದರೆ ಇನ್ನಿಂಗ್ಸ್‌ನ ಆರಂಭದಿಂದಲೇ ಬಿರುಸಿನ ಆಟವಾಡಿದ ನಾಯಕ ರೋಹಿತ್‌ ಶರ್ಮಾ(86 ರನ್‌, 63 ಬಾಲ್‌, 6 ಬೌಂಡರಿ, 6 ಸಿಕ್ಸ್‌) ಬಿರುಸಿನ ಆಟದಿಂದ ಪಾಕ್‌ ಬೌಲರ್‌ಗಳನ್ನ ಧೂಳಿಪಟ ಮಾಡಿದರು. ವೈಯಕ್ತಿಕ 86 ರನ್‌ಗಳಿಸಿ ಶತಕದತ್ತ ಮುಖ ಮಾಡಿದ್ದ ಹಿಟ್‌ಮ್ಯಾನ್‌ ಶಹೀನ್‌ ಅಫ್ರಿದಿ ಬೌಲಿಂಗ್‌ನಲ್ಲಿ ಔಟಾಗಿ ನಿರಾಸೆ ಅನುಭವಿಸಿದರು. ಆದರೆ ಜವಾಬ್ದಾರಿಯ ಆಟವಾಡಿದ ಶ್ರೇಯಸ್‌ ಅಯ್ಯರ್‌(53*) ಹಾಗೂ ಕೆಎಲ್‌ ರಾಹುಲ್‌(19*) ತಂಡವನ್ನ ಗೆಲುವಿನ ದಡಮುಟ್ಟಿಸಿದರು. ಪಾಕ್‌ ಪರ ಶಹೀನ್‌ ಅಫ್ರಿದಿ 2 ಹಾಗೂ ಹಸನ್‌ ಅಲಿ 1 ವಿಕೆಟ್‌ ಪಡೆದರು.
Points Table

ನಂ.1 ಸ್ಥಾನಕ್ಕೇರಿದ ಭಾರತ:
ಪಾಕಿಸ್ತಾನ ವಿರುದ್ಧದ 7 ವಿಕೆಟ್‌ಗಳ ಗೆಲುವಿನೊಂದಿಗೆ ಭಾರತ ತಂಡ ಏಕದಿನ ವಿಶ್ವಕಪ್‌ ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದ ರೋಹಿತ್‌ ಪಡೆ, ನಂತರ ಅಫ್ಘಾನಿಸ್ತಾನದ ವಿರುದ್ಧ ಜಯಭೇರಿ ಬಾರಿಸಿತ್ತು. ಇದೀಗ 3ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದುಬೀಗಿದ ಭಾರತ, ಹ್ಯಾಟ್ರಿಕ್‌ ಗೆಲುವಿನ ಮೂಲಕ +1.821 ರನ್‌ರೇಟ್‌ನಿಂದ ಮೊದಲ ಸ್ಥಾನಕ್ಕೇರಿದೆ.

Related posts

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

February 3, 2026
ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

February 3, 2026

IND v PAK, Team India, Pakistan, ODI Cricket, World Cup

Tags: IND v PAKODI cricketPakistanteam indiaWorld Cup
ShareTweetSendShare
Join us on:

Related Posts

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

by admin
February 3, 2026
0

ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

by Shwetha
February 3, 2026
0

ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿರುವ ಈ ಮೆಗಾ ಟೂರ್ನಿಯು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7...

Inderjit Singh Bindra: The bold administrator who changed the face of Indian cricket..!

ಇಂದರ್‌ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್‌ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!

by admin
January 29, 2026
0

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್‍ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...

CM Cup 2026 Jersey Unveiled - Uniquely Concepted Shuttle Badminton Tournament to be Held on Feb. 21-22

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ – ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ

by admin
January 27, 2026
0

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ * ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಟೂರ್ನಿ * * ಸಚಿವರು, ಶಾಸಕರು, ಐಎಎಸ್‌, ಐಪಿಎಸ್‌,...

ಟಿ20 ವಿಶ್ವಕಪ್ 2026 ಬಾಂಗ್ಲಾದೇಶಕ್ಕೆ ಗೇಟ್ ಪಾಸ್ ಸ್ಕಾಟ್ಲೆಂಡ್‌ಗೆ ರೆಡ್ ಕಾರ್ಪೆಟ್ ಐಸಿಸಿ ಐತಿಹಾಸಿಕ ತೀರ್ಮಾನ

ಟಿ20 ವಿಶ್ವಕಪ್ 2026 ಬಾಂಗ್ಲಾದೇಶಕ್ಕೆ ಗೇಟ್ ಪಾಸ್ ಸ್ಕಾಟ್ಲೆಂಡ್‌ಗೆ ರೆಡ್ ಕಾರ್ಪೆಟ್ ಐಸಿಸಿ ಐತಿಹಾಸಿಕ ತೀರ್ಮಾನ

by Shwetha
January 25, 2026
0

ವಿಶ್ವ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ನೆರೆಯ ಬಾಂಗ್ಲಾದೇಶವನ್ನು ಅಧಿಕೃತವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram