ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ “ಕ್ರಿಕೆಟ್ ದೇವರು” ಸಚಿನ್ ತೆಂಡುಲ್ಕರ್ ಅವರ ಏಕದಿನ ಕ್ರಿಕೆಟ್ನ ಸರ್ವಕಾಲಿಕ ದಾಖಲೆ ಮುರಿದಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಭರ್ಜರಿ ಬ್ಯಾಟಿಂಗ್ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಆ ಮೂಲಕ ಪ್ರಸಕ್ತ ವರ್ಷದಲ್ಲಿ ಏಕದಿನ ಕ್ರಿಕೆಟ್ನಲ್ಲಿ 1000 ರನ್ಗಳನ್ನ ಪೂರೈಸಿದ್ದಾರೆ. ಆ ಮೂಲಕ 2023ರಲ್ಲಿ 1000 ರನ್ಗಳನ್ನ ಪೂರೈಸಿದ ಭಾರತದ ಮೂರನೇ ಹಾಗೂ ವಿಶ್ವದ 4ನೇ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಪ್ರಸಕ್ತ ವರ್ಷದಲ್ಲಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಪತುಮ್ ನಿಸ್ಸಂಕಾ ಅವರುಗಳು ವಿರಾಟ್ ಕೊಹ್ಲಿ ಅವರಿಗೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಒಂದು ಸಾವಿರ ರನ್ಗಳನ್ನ ಪೂರೈಸಿದ್ದಾರೆ.

ಅಲ್ಲದೇ ಈ ಪ್ರದರ್ಶನದ ಮೂಲಕ ಕಿಂಗ್ ಕೊಹ್ಲಿ, ಒಂದು ವರ್ಷದಲ್ಲಿ ಹೆಚ್ಚು ಬಾರಿಯ ಸಾವಿರ ರನ್ಗಳನ್ನ ಪೂರೈಸಿದ್ದ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನ ಮುರಿದಿದ್ದಾರೆ. ಟೀಂ ಇಂಡಿಯಾದ ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್(1994, 1996, 1997, 1998, 2000, 2003 ಹಾಗೂ 2007) ಏಕದಿನ ಕ್ರಿಕೆಟ್ನಲ್ಲಿ ಒಂದು ಸಾವಿರ ರನ್ಗಳನ್ನ ಪೂರೈಸಿದ್ದರು. ಇದೀಗ ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೈಯಕ್ತಿಕ 34 ರನ್ಗಳನ್ನ ಪೂರೈಸುವ ಮೂಲಕ ಪ್ರಸಕ್ತ ವರ್ಷದಲ್ಲಿ ಒಂದು ಸಾವಿರ ರನ್ಗಳ ಗಡಿದಾಟಿದರು.
ಇದರೊಂದಿಗೆ ಚೇಸ್ ಮಾಸ್ಟರ್ ಕೊಹ್ಲಿ, 2011, 2012, 2013, 2014, 2017, 2018, 2019 ಹಾಗೂ 2023ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಒಂದು ಸಾವಿರ ರನ್ಗಳನ್ನ ಕಲೆಹಾಕುವ ಮೂಲಕ 8ನೇ ಬಾರಿಗೆ ಈ ಮೈಲುಗಲ್ಲು ತಲುಪುವ ಜೊತೆಗೆ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದರು.
IND v SL, Team India, Virat Kohli, Sachin Tendulkar, ODI Cricket








