ಏಕದಿನ ಕ್ರಿಕೆಟ್ನಲ್ಲಿ 49ನೇ ಶತಕ ಬಾರಿಸಿ ಇತಿಹಾಸ ನಿರ್ಮಿಸುವ ತವಕದಲ್ಲಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ(88) ಮತ್ತೊಮ್ಮೆ ಶತಕ ವಂಚಿತರಾಗಿ ನಿರಾಸೆ ಮೂಡಿಸಿದ್ದಾರೆ.
ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 49ನೇ ಶತಕ ದಾಖಲಿಸುವ ನಿರೀಕ್ಷೆ ಮೂಡಿಸಿದ್ದ ಕೊಹ್ಲಿ, ಆ ಮೂಲಕ “ಕ್ರಿಕೆಟ್ ದೇವರು” ಸಚಿನ್ ತೆಂಡುಲ್ಕರ್ ಅವರ ದಾಖಲೆ ಸರಿಗಟ್ಟುವ ತವಕದಲ್ಲಿದ್ದರು. ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಂತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ, ಆ ಮೂಲಕ ಆರಂಭಿಕ ಆಘಾತಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದರು.

ಲಂಕಾ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ವಿರಾಟ್ ಕೊಹ್ಲಿ, 49ನೇ ಶತಕ ದಾಖಲಿಸುವ ಎಲ್ಲಾ ಅವಕಾಶ ಹೊಂದಿದ್ದಾರೆ. ಆದರೆ 94 ಬಾಲ್ಗಳಲ್ಲಿ 11 ಬೌಂಡರಿ ನೆರವಿನಿಂದ 88 ರನ್ಗಳಿಸಿದ್ದ ಕಿಂಗ್ ಕೊಹ್ಲಿ, 31.3 ಓವರ್ಗಳಲ್ಲಿ ಮಧುಶಂಕ ಬೌಲಿಂಗ್ನಲ್ಲಿ ಔಟಾಗಿ ಭಾರೀ ನಿರಾಸೆ ಅನುಭವಿಸಿದರು. ಇದರೊಂದಿಗೆ ವಾಂಖೆಡೆ ಅಂಗಳದಲ್ಲಿ ಇತಿಹಾಸ ನಿರ್ಮಿಸುವ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕೂಡ ಮತ್ತೆ ನಿರಾಸೆ ಅನುಭವಿಸಿದರು. ಆದರೆ ತಮ್ಮ ಇನ್ನಿಂಗ್ಸ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್(92) ಜೊತೆಗೂಡಿ 2ನೇ ವಿಕೆಟ್ಗೆ 189 ರನ್ಗಳ ಅದ್ಭುತ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.

ಶತಕ ವಂಚಿತ ಗಿಲ್:
ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲದೇ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್(92) ಕೂಡ ಶತಕ ವಂಚಿತರಾಗಿ ನಿರಾಸೆ ಮೂಡಿಸಿದರು. ಲಂಕಾದ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಗಿಲ್, 92 ಬಾಲ್ನಲ್ಲಿ 11 ಬೌಂಡರಿ, 2 ಸಿಕ್ಸ್ ನೆರವಿನಿಂದ 92 ರನ್ಗಳಿಸಿ ಶತಕದ ಮುಖ ಮಾಡಿದ್ದಾರೆ. ಆದರೆ ಏಕದಿನ ವಿಶ್ವಕಪ್ನ ತಮ್ಮ ಚೊಚ್ಚಲ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದ ಶುಭ್ಮನ್ ಗಿಲ್ ಕೂಡ ಮಧುಶಂಕ ಅವರ ಬೌಲಿಂಗ್ನಲ್ಲಿ ಔಟಾಗಿ ಶತಕ ವಂಚಿತರಾಗಿ ಪೆವಿಲಿಯನ್ ಸೇರಿದರು.
IND v SL, Team India, Virat Kohli, Sachin Tendulkar, ODI Cricket








