IND vs AUS : ಇಂಧೋರ್ ಟೆಸ್ಟ್‌ನಲ್ಲಿ ನಾಯಕತ್ವದಲ್ಲಿ ಮಿಂಚಿದ ಸ್ಟೀವ್ ಸ್ಮಿತ್
ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಎರಡು ಟೆಸ್ಟ್‌ಗಳಲ್ಲಿ ಸೋಲಿನ ಆಘಾತ ಕಂಡಿದ್ದ ಆಸೀಸ್ ಪಡೆಯನ್ನ ಗೆಲುವಿನ ಲಯಕ್ಕೆ ತರುವ ಮೂಲಕ ಸ್ಟೀವ್ ಸ್ಮಿತ್ ತಾವೊಬ್ಬ ಯಶಸ್ವಿ ಯಶಸ್ವಿ ಕ್ಯಾಪ್ಟನ್ ಎಂಬುದನ್ನ ಮತ್ತೆ ಸಾಬೀತುಪಡಿಸಿದ್ದಾರೆ.
ಇಂಧೋರ್‌ನಲ್ಲಿ ನಡೆದ ಸರಣಿಯ 3ನೇ ಟೆಸ್ಟ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್, ಆಸ್ಟ್ರೇಲಿಯಾ ತಂಡದ ನಾಯಕತ್ವದ ಹೊಣೆ ಹೊತ್ತಿದ್ದರು. ಆದರೆ ತಂಡಕ್ಕೆ ಎದುರಾಗಿದ್ದ ಸೋಲಿನ ಸಂಕಷ್ಟದ ನಡುವೆಯೂ ತಂಡವನ್ನ ಗೆಲುವಿನ ಹಾದಿಗೆ ತರುವಲ್ಲಿ ಸ್ಟೀವ್ ಸ್ಮಿತ್ ದೊಡ್ಡಮಟ್ಟದ ಸಕ್ಸಸ್ ಕಂಡಿದ್ದಾರೆ.
ಸ್ಟೀವ್ ಸ್ಮಿತ್ ಭಾರತದಲ್ಲಿ ಆಸೀಸ್ ತಂಡದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಅವರಿಗಿಂತ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಸ್ಟೀವ್ ಸ್ಮಿತ್ ಭಾರತದಲ್ಲಿ ಈವರೆಗೂ 5 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದು, ಇದರಲ್ಲಿ 2 ಗೆಲುವು ಕಂಡಿದ್ದಾರೆ.
3ನೇ ಟೆಸ್ಟ್‌ನಲ್ಲಿ ನಾಯಕನಾಗಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ ಸ್ಮಿತ್, ನಿರ್ಣಾಯಕ ಹಂತದಲ್ಲಿ ಬೌಲಿಂಗ್ ಬದಲಾವಣೆಗಳನ್ನ ಮಾಡಿದ್ದು, ತಂಡದ ಗೆಲುವಿಗೆ ಅತ್ಯಂತ ಪ್ರಮುಖ ಕಾರಣವಾಯಿತು.
ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟ ಸ್ಟೀವ್ ಸ್ಮಿತ್, ಆಸೀಸ್ ತಂಡವನ್ನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪ್ರವೇಶ ಕೊಡಿಸುವಲ್ಲಿ ಸಕ್ಸಸ್ ಕಂಡಿದ್ದಾರೆ.
ಅಲ್ಲದೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಹ್ಮದಾಬಾದ್‌ನಲ್ಲಿ ನಡೆಯುವ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಮುಖಾಮುಖಿ ಆಗಲಿದ್ದು, ಈ ಟೆಸ್ಟ್‌ನಲ್ಲೂ ಸಹ ಸ್ಟೀವ್ ಸ್ಮಿತ್ ತಂಡವನ್ನ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
ಇನ್ನೂ ಪಂದ್ಯದ ಬಳಿಕ ಮಾತನಾಡಿದ ಸ್ಟೀವ್ ಸ್ಮಿತ್, ಬಹುಶಃ ಭಾರತ ನಾಯಕನಾಗಿ ತಂಡವನ್ನ ಮುನ್ನಡೆಸಲು ಬಯಸುವ ನೆಚ್ಚಿನ ಸ್ಥಳವಾಗಿದೆ. ಇಲ್ಲಿನ ಪಿಚ್‌ಗಳಲ್ಲಿ ಆಡುವುದು ಮತ್ತು ಪ್ರತಿ ಬಾಲ್‌ಗಳನ್ನು ಎದುರಿಸುವುದು ಸವಾಲಿನ ಸಂಗತಿ ಎಂದಿದ್ದಾರೆ.
IND vs AUS : Steve Smith shines as captain in Indore Test