Ind Vs Ban 2nd Test : K L ರಾಹುಲ್ ಮತ್ತೆ ವಿಫಲ, ಭಾರತಕ್ಕೆ 145 ರನ್ ಗುರಿ…
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ತಂಡ ಭಾರತಕ್ಕೆ 145 ರನ್ ಗಳ ಗುರಿ ನೀಡಿದೆ. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಮೂರನೇ ದಿನದ ಕೊನೆಯ ಅವಧಿಯಲ್ಲಿ 12 ರನ್ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ಕೆಎಲ್ ರಾಹುಲ್ 2 ರನ್ ಗಳಿಸಿದ್ದಾಗ ಶಕೀಬ್ ಬೌಲಿಂಗ್ ನಲ್ಲಿ ನೂರುಲ್ ಹಸನ್ ಗೆ ಕ್ಯಾಚ್ ನೀಡಿದ್ದಾರೆ. 6 ರನ್ ಗಳಿಸಿ ಆಡುತ್ತಿದ್ದ ಪೂಜಾರ ಮೆಹದಿ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆಗಿದ್ದಾರೆ.
ಇದಕ್ಕೂ ಮೊದಲು ಆತಿಥೇಯ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 231 ರನ್ಗಳಿಗೆ ಆಲೌಟ್ ಆಗಿತ್ತು. ಬಾಂಗ್ಲಾ ಪರ ಲಿಟನ್ ದಾಸ್ (73) ಮತ್ತು ಜಾಕಿರ್ ಹಸನ್ (51) ಅರ್ಧಶತಕ ಭಾರಿಸಿ ತಂಡವನ್ನ ಕುಸಿತದಿಂದ ಪಾರು ಮಾಡಿದರು. ನಿರ್ಣಾಯಕ ಹಂತದಲ್ಲಿ ವಿಕೆಟ್ಕೀಪರ್ಗಳಾದ ನೂರುಲ್ ಹಸನ್ ಮತ್ತು ತಸ್ಕಿನ್ ಅಹ್ಮದ್ 31-31 ರನ್ ಗಳಿಸಿ ತಂಡದ ಮೊತ್ತವನ್ನ 200 ಗಡಿ ದಾಟಿಸಿದರು. ಭಾರತದ ಪರ ಅಕ್ಷರ್ ಪಟೇಲ್ 3 ವಿಕೆಟ್ ಪಡೆದರೇ ಅಶ್ವಿನ್-ಸಿರಾಜ್ ತಲಾ ಎರಡು ವಿಕೆಟ್ ಕಿತ್ತಿದ್ದಾರೆ. ಉಮೇಶ್ ಯಾದವ್-ಜೈದೇವ್ ಉನದ್ಕತ್ ತಲಾ ಒಂದು ವಿಕೆಟ್ ಹಂಚಿಕೊಂಡಿದ್ದಾರೆ.
ಭಾರತದ ಮೊದಲ ಇನಿಂಗ್ಸ್ ಮೊದಲ ಎರಡು ದಿನಗಳಲ್ಲಿ 314 ರನ್ಗಳಿಗೆ ಅಂತ್ಯಗೊಂಡಿತ್ತು. ಬಾಂಗ್ಲಾದೇಶ ಮೊದಲ ಇನಿಂಗ್ಸ್ನಲ್ಲಿ 227 ರನ್ ಗಳಿಸಿತ್ತು. ಈ ಮೂಲಕ ಭಾರತ ಮೊದಲ ಇನಿಂಗ್ಸ್ನಲ್ಲಿ 87 ರನ್ಗಳ ಮುನ್ನಡೆ ಸಾಧಿಸಿತ್ತು.
Ind Vs Ban 2nd Test : K L Rahul fails again, India target 145 runs…








