IND vs BAN : ಇಶಾನ್ ಕಿಶಾನ್ ಗೆ ಸೋತ ಬಾಂಗ್ಲಾ, 182 ರನ್ ಗಳಿಗೆ ಆಲೌಟ್…
ಈಗಾಗಲೇ ಸತತ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ಟೀಂ ಇಂಡಿಯಾ ಮೂರನೇ ಏಕದಿನ ಪಂದ್ಯದಲ್ಲಿ ತಿರುಗೇಟು ನೀಡಿದ್ದು, ಬಾಂಗ್ಲಾದೇಶವನ್ನ 227 ರನ್ ಗಳ ಬೃಹತ್ ಅಂತರದಿಂದ ಸೋಲಿಸಿದೆ.
ಕ್ಲೀನ್ ಸ್ವೀಪ್ ಭಯದಿಂದ ಪಾರಾದ ಭಾರತ ಏಕದಿನ ಕ್ರಿಕೆಟ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಅತಿದೊಡ್ಡ ಅಂತರದ ಗೆಲುವು ಗಳಿಸಿದೆ. ಭಾರತ 2003 ರಲ್ಲಿ ಢಾಕಾದಲ್ಲಿ 200 ರನ್ ಗಳ ಅಂತರದಿಂದ ಸೋತಿದೆ.
ಚಿತ್ತಗಾಂಗ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಇಶಾನ್ ಕಿಶನ್ (210) ದ್ವಿಶತಕ ಮತ್ತು ವಿರಾಟ್ ಕೊಹ್ಲಿ (113) 44ನೇ ಏಕದಿನ ಶತಕದ ನೆರವಿನಿಂದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 409 ರನ್ ಬೃಹತ್ ಮೊತ್ತ ಗಳಿಸಿತು. ಇಶಾನ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಕೇವಲ 126 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು.
ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 34 ಓವರ್‌ಗಳಲ್ಲಿ 182 ರನ್‌ಗಳಿಸಲಷ್ಟೆ ಶಕ್ತವಾಯಿತು. ಶಕೀಬ್ ಅಲ್ ಹಸನ್ ಬಾಂಗ್ಲಾ ಪರ ಗರಿಷ್ಠ 43 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಪಡೆದು ಮಿಂಚಿದರು.
ಇನ್ನೂ ರನ್ ಮಶಿನ್ ಕಿಂಗ್ ಕೊಹ್ಲಿ 40 ತಿಂಗಳ ನಂತರ 44 ನೇ ಏಕದಿನ ಸೆಂಚುರಿಯನ್ನ ಬಾಂಗ್ಲಾದೇಶದ ವಿರುದ್ಧ ಸಿಕ್ಸ್ ಭಾರಿಸುವ ಮೂಲಕ ಪೂರೈಸಿಕೊಂಡಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ 72 ನೇ ಅಂತರಾಷ್ಟ್ರೀಯ ಸೆಂಚುರಿಯನ್ನ ವಿರಾಟ್ ಕೊಹ್ಲಿ ದಾಖಲಿಸಿದ್ದಾರೆ.
1200 ದಿನಗಳ ಬಳಿಕ ವಿರಾಟ್ 50 ಓವರ್ ಗಳ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
IND vs BAN: Bangladesh lost to Ishan Kishan, all out for 182 runs…








