IND vs ENG 1st T20: ಹಾರ್ದಿಕ್ ಆಲ್ ರೌಂಡರ್ ಶೋ… ಭಾರತಕ್ಕೆ ಜಯ
ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 50 ರನ್ ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ (51 ರನ್, 4 ವಿಕೆಟ್) ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.
ಹಾರ್ದಿಕ್ ಪಾಂಡ್ಯ (33 ಎಸೆತಗಳಲ್ಲಿ 51 ರನ್, 6 ಬೌಂಡರಿ, 1 ಸಿಕ್ಸರ್), ದೀಪಕ್ ಹೂಡಾ (17 ಎಸೆತಗಳಲ್ಲಿ 33 ರನ್, 3 ಬೌಂಡರಿ, 2 ಸಿಕ್ಸರ್), ಸೂರ್ಯಕುಮಾರ್ ಯಾದವ್ (19 ಎಸೆತಗಳಲ್ಲಿ 39 ರನ್, 4 ಬೌಂಡರಿ, 2 ಸಿಕ್ಸರ್) ಮಿಂಚಿದರು.
ಇದಕ್ಕೂ ಮುನ್ನ ರೋಹಿತ್ ಶರ್ಮಾ 14 ಎಸೆತಗಳಲ್ಲಿ 24 ರನ್ ಗಳಿಸಿದ್ದರು.

ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 19.3 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್ ಆಯ್ತು.
ಭುವನೇಶ್ವರ್ ಬೌಲಿಂಗ್‌ನಲ್ಲಿ ನೂತನ ನಾಯಕ ಜೋಸ್ ಬಟ್ಲರ್ ಗೋಲ್ಡನ್ ಡಕ್ ಆಗಿ ಹಿಂತಿರುಗಿದರು.
ನಂತರ ಹ್ಯಾರಿ ಬ್ರೂಕ್ 28 ಮತ್ತು ಮೊಯಿನ್ ಅಲಿ 36 ರನ್ ಗಳಿಸಿದರು ಆದರೆ ಇಂಗ್ಲೆಂಡ್ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.
ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅರ್ಷದೀಪ್ (2 ವಿಕೆಟ್) ಮತ್ತು ಚಹಾಲ್ (2 ವಿಕೆಟ್) ಸತತ ವಿಕೆಟ್ ಕಬಳಿಸಿ ಇಂಗ್ಲೆಂಡ್ ಗೆ ಆಘಾತ ನೀಡಿದರು.
ಅಂತಿಮವಾಗಿ ಜೋರ್ಡಾನ್ 26 ರನ್ ಗಳಿಸಿ ಔಟಾಗದೆ ಉಳಿದರು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಉಭಯ ತಂಡಗಳ ನಡುವಿನ ಎರಡನೇ ಟಿ20 ಶನಿವಾರ (ಜುಲೈ 9) ನಡೆಯಲಿದೆ.