Rohit Sharma : ಹಾರ್ದಿಕ್ ಪಾಂಡ್ಯ ಬಗ್ಗೆ ರೋಹಿತ್ ಹೇಳಿದ್ದೇನು..?
ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ನಾಯಕ ರೋಹಿತ್ ಶರ್ಮಾ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಬೌಲಿಂಗ್ ನಲ್ಲಿ ವೆರೈಟಿ ಎಸೆತಗಳನ್ನು ಹಾಕುವ ಮೂಲಕ ಹಾರ್ದಿಕ್ ಇಂಗ್ಲೆಂಡ್ ಬ್ಯಾಟರ್ ಗಳಿಗೆ ಕಡಿವಾಣ ಹಾಕಿದರು.
ಭವಿಷ್ಯದಲ್ಲಿ ಹಾರ್ದಿಕ್ ಇದೇ ರೀತಿ ಪ್ರದರ್ಶನ ನೀಡಬೇಕು ಎಂದು ರೋಹಿತ್ ಶರ್ಮಾ ಹೇಳಿದ್ರು.
ಸೌತ್‌ಹ್ಯಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, 20 ಓವರ್‌ಗಳಲ್ಲಿ 8 ವಿಕೆಟ್‌ಗೆ 198 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ 19.3 ಓವರ್‌ಗಳಲ್ಲಿ 148 ರನ್‌ಗಳಿ ಆಲೌಟ್ ಆಗುವ ಮೂಲಕ 50 ರನ್‌ಗಳ ಸೋಲನುಭವಿಸಿತು.
ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಈ ಗೆಲುವಿನ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಮೊದಲ ಎಸೆತದಿಂದಲೇ ನಾವು ಅದ್ಭುತವಾಗಿ ಎದುರಾಳಿ ಮೇಲೆ ಒತ್ತಡ ಹಾಕಿದ್ವಿ, ಬ್ಯಾಟರ್ ಗಳು ಉತ್ತಮವಾಗಿ ಆಡಿದ್ರು.
ನಿಜ ಹೇಳಬೇಕಾದ್ರೆ ಪಿಚ್ ಚೆನ್ನಾಗಿತ್ತು. ಒಳ್ಳೆಯ ಶಾಟ್ ಗಳನ್ನು ಆಡಿದ್ವಿ. ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಆಕ್ರಮಣಕಾರಿಯಾಗಿ ದಾಳಿ ನಡೆಸಿದರು.
ಭವಿಷ್ಯದಲ್ಲಿ ಅವರು ಮತ್ತಷ್ಟು ಪರಿಣಾಮಕಾರಿಯಾಗಿ ಆಡಬೇಕು. ಬ್ಯಾಟಿಂಗ್ ನಲ್ಲೂ ಕೂಡ ಅದ್ಭುತ ಇನ್ನಿಂಗ್ಸ್ ಆಡಿದ್ರು. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಆದ್ರೆ ನಾವು ಕೆಲವು ಕ್ಯಾಚ್ ಗಳನ್ನು ಮಿಸ್ ಮಾಡಿದ್ದು ನಿರಾಸೆ ತಂದಿದೆ. ಮುಂಬರುವ ಪಂದ್ಯದಲ್ಲಿ ನಾವು ಈ ತಪ್ಪು ಮಾಡೋದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.