IND Vs ENG 2022 : ವಿರಾಟ್ ಕೊಹ್ಲಿ.. ರೋಹಿತ್ ಶರ್ಮಾಗೆ ಬಿಸಿಸಿಐ ವಾರ್ನಿಂಗ್..!!
1 min read
shoaib-akhtar-rohit-sharma-and-virat-kohli saaksha tv
IND Vs ENG 2022 : ವಿರಾಟ್ ಕೊಹ್ಲಿ.. ರೋಹಿತ್ ಶರ್ಮಾಗೆ ಬಿಸಿಸಿಐ ವಾರ್ನಿಂಗ್..!!
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ಸ್ಟ್ರಿಕ್ಟ್ ವಾರ್ನಿಂಗ್ ನೀಡಿದೆ.
ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ವಿರಾಟ್, ರೋಹಿತ್ ಫೋಟೋಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಒಂದು ಟೆಸ್ಟ್, ಮೂರು ಟಿ 20, ಏಕದಿನ ಸರಣಿಗಾಗಿ ಟೀಂ ಇಂಡಿಯಾದ ಆಟಗಾರರು ಲಂಡನ್ ನಲ್ಲಿ ಲ್ಯಾಂಡ್ ಆಗಿದ್ದಾರೆ.
ಲಿಸೆಸ್ಟರ್ ಶೈರ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಾ ಬ್ಯೂಸಿ ಬ್ಯೂಸಿಯಾಗಿದ್ದಾರೆ.
ಆದ್ರೆ ಎರಡು ದಿನಗಳ ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಶಾಪಿಂಗ್ ಅಂತಾ ಲಂಡನ್ ಬೀದಿಗಳಲ್ಲಿ ಯದ್ವಾತದ್ವಾ ಸುತ್ತಾಡಿ, ಅಭಿಮಾನಿಗಳ ಜೊತೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ಯುಕೆಯಲ್ಲಿ ಕೊರೊನಾ ಸೋಂಕಿನ ಅಬ್ಬರ ಇನ್ನೂ ಜೀವಂತವಾಗಿದೆ. ಹೀಗಿದ್ದಾರೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮಾಸ್ಕ್ ಇಲ್ಲದಂತೆ ಲಂಡನ್ ಬೀದಿಗಳಲ್ಲಿ ಸುತ್ತಾಡುವುದನ್ನ ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡಿದೆ.

ಇದೇ ವಿಚಾರವಾಗಿ ಬಿಸಿಸಿಐ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾದ ಆಟಗಾರರಿಗೆ ವಾರ್ನಿಂಗ್ ನೀಡಿದೆಯಂತೆ.
ಟೀಂ ಇಂಡಿಯಾದ ಆಟಗಾರರು ಕೊರೊನಾ ಪ್ರೋಟೋಕಾಲ್ ಗಳನ್ನು ಪಾಲಿಸುತ್ತಾ ಎಚ್ಚರಿಕೆಯಿಂದ ಇರಬೇಕು.
ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ವಾರ್ನಿಂಗ್ ನೀಡಿದೆ.
ಅಲ್ಲದೆ ಯುಕೆಯಲ್ಲಿ ಕೊರೊನಾ ಸೋಂಕಿನ ತೀವ್ರತೆ ಕೆಲವು ದಿನಗಳಿಂದ ಇಳಿಮುಖವಾಗಿದ್ದರೂ ಅಲ್ಲಿ ಈಗಲೂ ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ನಮೂದಾಗುತ್ತಿವೆ ಎಂದು ವರದಿಯಾಗಿದೆ.
ಈಗಾಗಲೇ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರು ತಂಡದಿಂದ ದೂರ ಉಳಿದಿದ್ದಾರೆ.
ಇದು ಹೀಗಿದ್ದರೇ ಇಂಗ್ಲೆಂಡ್ ಪ್ರವಾಸದಲ್ಲಿ ಉಳಿದು ಹೋಗಿರುವ ಟೆಸ್ಟ್ ಮ್ಯಾಚ್ ಜುಲೈ ಒಂದರಿಂದ ಆರಂಭವಾಗಲಿದೆ.
ಐದು ಮ್ಯಾಚ್ ಗಳ ಟೆಸ್ಟ್ ಸಿರೀಸ್ ನಲ್ಲಿ ಕಳೆದ ವರ್ಷ ನಡೆದ ಟೆಸ್ಟ್ ಮ್ಯಾಚ್ ಗಳಲ್ಲಿ ಟೀಂ ಇಂಡಿಯಾ 2-1ರಲ್ಲಿ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ : ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮಾ ವಿಹಾರಿ, ಚೇತೇಶ್ವರ ಪೂಜಾರಾ, ರಿಷಬ್ ಪಂತ್, ಕೆ.ಎಸ್.ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶರ್ದೂಲ್ ಠಾಕೂರ್, ಮೊಹ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಮೊಹ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕ್ರಿಷ್ಣ