Ind Vs Eng 5th Test : ಕನ್ನಡಿಗನ ಗೈರಿನಲ್ಲಿ ಹಿಟ್ ಮ್ಯಾಚ್ ಗೆ ದೊಡ್ಡ ಸವಾಲು..!
1 min read
Ind Vs Eng 5th Test : ಕನ್ನಡಿಗನ ಗೈರಿನಲ್ಲಿ ಹಿಟ್ ಮ್ಯಾಚ್ ಗೆ ದೊಡ್ಡ ಸವಾಲು..!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕೆಎಲ್ ರಾಹುಲ್ ಅವರ ಸೇವೆಯನ್ನು ಕಳೆದುಕೊಂಡಿರುವುದು ದೊಡ್ಡ ಹಿನ್ನಡೆಯಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಆಯ್ಕೆಗಾರ ಸಾಬಾ ಕರೀಂ ಹೇಳಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಸ್ಕೋರ್ ಗಳಿಸಿದ ಕರ್ನಾಟಕದ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಅವರನ್ನು ಶ್ಲಾಘಿಸಿದರು.
ಅಂತಹ ಅಗ್ರ ಆಟಗಾರ ಈಗ ತಂಡದಿಂದ ದೂರವಿರುವುದು ರೋಹಿತ್ ಶರ್ಮಾಗೆ ದೊಡ್ಡ ಸವಾಲು ಎಂದಿದ್ದಾರೆ.
ರಾಹುಲ್ ಅವರ ಅಲಭ್ಯತೆ ನಾಯಕ ರೋಹಿತ್ ಶರ್ಮಾ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.
ಹೀಗಾಗಿ ಆರಂಭಿಕರಾಗಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಆಗಸ್ಟ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು.

ಐದು ಪಂದ್ಯಗಳ ಸರಣಿಯ ಭಾಗವಾಗಿ ಮೊದಲ ಟೆಸ್ಟ್ ಡ್ರಾ ಆಗಿತ್ತು. ಎರಡನೇ ಟೆಸ್ಟ್ ನಲ್ಲಿ ಕೆಎಲ್ ರಾಹುಲ್ ಅವರ ಶತಕ (129) ಸಿಡಿಸಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ್ದರು.
ಹೀಗಾಗಿಯೇ ಈ ಸಂಬಂಧ ಮಾತನಾಡಿದ ಸಾಬಾ ಕರೀಂ, ‘ಭಾರತ ಈ ನಿರ್ಣಾಯಕ ಸಮಯದಲ್ಲಿ ಸ್ಟಾರ್ ಆಟಗಾರನ ಸೇವೆಯನ್ನು ಕಳೆದುಕೊಂಡಿದೆ. ಕೆಎಲ್ ರಾಹುಲ್ ಇಲ್ಲದಿರುವುದು ದೊಡ್ಡ ಕೊರತೆ.
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದ ಎರಡು ಪಂದ್ಯಗಳಲ್ಲಿ ರಾಹುಲ್ ಪ್ರಭಾವ ಬೀರಿದ್ದರು. ತಂಡದ ಗೆಲುವಿನಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದು, ಈ ಬಾರಿ ಭಾರತ ತಂಡ ಖಂಡಿತವಾಗಿಯೂ ಅವರ ಸೇವೆಯನ್ನು ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಕರೀಂ, “ರಾಹುಲ್ ಅನುಪಸ್ಥಿತಿಯಿಂದ ರೋಹಿತ್ ಜವಾಬ್ದಾರಿ ದ್ವಿಗುಣಗೊಂಡಿದೆ.
ಕಳೆದ ವರ್ಷ ರಾಹುಲ್ ಜೊತೆ ಭಾರತಕ್ಕೆ ಶುಭಾರಂಭ ನೀಡಿದ್ದರು. ಈ ಬಾರಿಯೂ ಅದೇ ಮಟ್ಟದಲ್ಲಿ ಮಿಂಚಬೇಕಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳ ಜೋಡಿಯಾದರೆ ಟೀಂ ಇಂಡಿಯಾ ಉತ್ತಮ ಸ್ಕೋರ್ ದಾಖಲಿಸಬಹುದು ಎಂದಿದ್ದಾರೆ.