IND vs ENG : ಇಶಾನ್ ಕಿಶನ್ ಬೇಡ ವಿರಾಟ್ ಇನ್ನಿಂಗ್ಸ್ ಓಪನ್ ಮಾಡಲಿ
ಸೌತಾಂಪ್ಟನ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 50 ರನ್ ಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಧೂಳೆಬ್ಬಿಸಿದೆ.
ಆದರೆ ಮೊದಲ ಟಿ20ಯಲ್ಲಿ ಭಾರತದ ಎಲ್ಲಾ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡಿದರೂ ಆರಂಭಿಕ ಆಟಗಾರ ಇಶಾನ್ ಕಿಶನ್ ನಿರಾಸೆ ಮೂಡಿಸಿದರು.
ಕೇವಲ 8 ರನ್ ಗಳಿಸಿ ಪೆವಿಲಿಯನ್ ತಲುಪಿದರು.
ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟಿ20ಯಲ್ಲಿ ಇಶಾನ್ ಕಿಶನ್ ಬದಲಿಗೆ ಕೊಹ್ಲಿ ಭಾರತದ ಪರ ಓಪನಿಂಗ್ ಮಾಡಬೇಕು ಎಂದು ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಯಂತಹ ಆಟಗಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದು. ಮೊದಲ ಟಿ20ಗೆ ವಿಶ್ರಾಂತಿ ಪಡೆದ ಕೊಹ್ಲಿ ಎರಡನೇ ಟಿ20ಗೆ ರೆಡಿಯಾಗಿದ್ದಾರೆ.
“ವಿರಾಟ್ ಅಂತಿಮ ತಂಡಕ್ಕೆ ಬಂದರೆ, ಕಿಶನ್ ಬದಲಿಗೆ ಅವರು ಓಪನ್ ಮಾಡಬೇಕು ಎಂದು ನಾನು ಭಾವಿಸುತ್ತೇನೆ
ಕೊಹ್ಲಿಯಂತಹ ಶ್ರೇಷ್ಠ ಆಟಗಾರನನ್ನು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬಾರದು.
ಕೊಹ್ಲಿ ಓಪನರ್ ಆಗಿ ಬರಬೇಕು. ಇನ್ನೊಂದು ತುದಿಯಲ್ಲಿ ರೋಹಿತ್ ಆಕ್ರಮಣಕಾರಿ ಆಟವಾಡಿದರೆ, ಕೊಹ್ಲಿ ಕೂಡ ಅದನ್ನೇ ಅನುಸರಿಸುತ್ತಾರೆ.
ಇಬ್ಬರೂ ದೊಡ್ಡ ಮೊತ್ತವನ್ನು ಗಳಿಸಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರೆ, ಹೂಡಾ ಮತ್ತು ಸೂರ್ಯ ಅವರ ಕೆಲಸವನ್ನು ಅವರು ಮಾಡುತ್ತಾರೆ ಎಂದು ಹೇಳಿದ್ದಾರೆ.