Ind Vs New : ಭಾರತಕ್ಕೆ ಭರ್ಜರಿ ಗೆಲುವು : ಶಮಿ ಮಾರಕ ದಾಳಿ, ರೋಹಿತ್ ಹಾಫ್ ಸೆಂಚ್ಯುರಿ
ವೇಗಿ ಮೊಹ್ಮದ್ ಶಮಿ ಮಾರಕ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 2-0 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ರಾಯ್ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಮೈದಾನದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 34.3 ಓವರ್ಗಳಲ್ಲಿ 108 ರನ್ಗಳಿಗೆ ಆಲೌಟ್ ಆಯಿತು. ಭಾರತ 20.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಕಲೆ ಹಾಕಿತು.
ನ್ಯೂಜಿಲೆಂಡ್ ತಂಡಕ್ಕೆ ಭಾರತ ತಂಡದ ವೇಗಿ ಮೊಹ್ಮದ್ ಶಮಿ ಆಘಾತಗಳ ಆಘಾತ ನೀಡಿದರು. ಪರ ಆರಂಭಿಕರಾಗಿ ಕಣಕ್ಕಿಳಿದ ಫಿನ್ ಆಲೆನ್ (0 ರನ್) ಮತ್ತು ಡೆವೊನ್ ಕಾನ್ವೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು.
ಫಿನ್ ಅಲೆನ್ ಮೊದಲ ಓವರ್ನಲ್ಲೆ ಶಮಿ ಎಸೆತದಲ್ಲಿ ಬೌಲ್ಡ್ ಆದರು. 2 ರನ್ ಗಳಿಸಿದ್ದ ಹೆನ್ರಿ ನಿಕೊಲೊಸ್ (2ರನ್)ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ನಂತರ 6ನೇ ಓವರ್ನಲ್ಲೆ ಮತ್ತೆ ದಾಳಿಗಿಳಿದ ಶಮಿ ಡ್ಯಾರಿಲ್ ಮಿಚೆಲ್ ಅವರನ್ನು ಕಾಟ್ ಅಂಡ್ ಬೌಲ್ಡ ಮಾಡಿದರು.
ಆರಂಭಿಕ ಬ್ಯಾಟರ್ ಡೇವೊನ್ ಕಾನ್ವೆ ಹಾರ್ದಿಕ್ಗೆ ಕಾಟ್ ಅಂಡ್ ಬೌಲ್ಡ್ ಆದರು. ನಾಯಕ ಟಾಮ್ ಲಾಥಮ್ ಸ್ಲಿಪ್ನಲ್ಲಿ ಶುಭಮನ್ಗಿಲ್ಗೆ ಕ್ಯಾಚ್ ನೀಡಿದರು. 15 ರನ್ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಆರನೆ ವಿಕೆಟ್ಗೆ ಜೊತೆಗೂಡಿದ ಗ್ಲೇನ್ ಫಿಲೀಪ್ಸ್ ಮತ್ತು ಮೈಕಲ್ ಬ್ರೇಸ್ವೆಲ್ 41 ರನ್ ಜೊತೆಯಾಟ ಆಡಿ ತಂಡದ ಕುಸಿತ ತಡೆದರು.
ಆದರೆ 19ನೇ ಓವರ್ನಲ್ಲಿ ದಾಳಿಗಿಳಿದ ಶಮಿ ಮೈಕಲ್ ಬ್ರೇಸ್ವೆಲ್ ಅವರನ್ನು (22 ರನ್)ಪೆವಿಲಿಯನ್ಗೆ ಅಟ್ಟಿದರು. ಗ್ಲೇನ್ ಫಿಲೀಪ್ಸ್ ಜೊತೆಗೂಡಿದ ಮಿಚೆಲ್ ಸ್ಯಾಂಟ್ನರ್ 27 ರನ್ ಗಳಿಸಿದ್ದಾಗ ಹಾರ್ದಿಕ್ ಎಸೆತದಲ್ಲಿ ಬೌಲ್ಡ್ ಆದರು. ನಂತರ 36 ರನ್ ಗಳಿಸಿದ್ದ ಗ್ಲೇನ್ ಫಿಲೀಪ್ಸ್ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು. ಹೆನ್ರಿ ಶಿಪ್ಲೆ 2, ಲಾಕಿ ಫರ್ಗ್ಯುಸನ್ 1, ಬ್ಲೇರ್ ಟಿಕ್ನರ್ 2 ರನ್ ಗಳಿಸಿದರು.
ಭಾರತ ಪರ ಮೊಹ್ಮದ್ ಶಮಿ 18ಕ್ಕೆ 3, ವಾಷಿಂಗ್ಟನ್ ಸುಂದರ್ 7ಕ್ಕೆ 2, ಹಾರ್ದಿಕ್ 17ಕ್ಕೆ 2, ಮೊಹ್ಮದ್ ಸಿರಾಜ್ 10ಕ್ಕೆ 1, ಶಾರ್ದೂಲ್ ಠಾಕೂರ್ 26ಕ್ಕೆ 1, ಕುಲ್ದೀಪ್ ಯಾದವ್ 29ಕ್ಕೆ 1 ವಿಕೆಟ್ ಪಡೆದರು.
ಅರ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ
109ರನ್ ಸುಲಭ ರನ್ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ (51 ರನ್) ಶುಭಮನ್ ಗಿಲ್ (ಅಜೇಯ 40)ಮೊದಲ ವಿಕೆಟ್ಗೆ 72 ರನ್ ಸೇರಿಸಿದರು. ರೋಹಿತ್ 47 ಎಸೆತದಲ್ಲಿ ಅರ್ಧ ಶತಕ ಸಿಡಿಸಿ ಶಿಪ್ಲೆ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ವಿರಾಟ್ ಕೊಹ್ಲಿ 11 ರನ್ ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್ ಆದರು. ಇಶನ್ ಕಿಶನ್ ಅಜೇಯ 8 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ಹೆನ್ರಿ ಶಿಪ್ಲೆ 29ಕ್ಕೆ 1, ಮಿಚೆಲ್ ಸ್ಯಾಂಟ್ನರ್ 28ಕ್ಕೆ 1 ವಿಕೆಟ್ ಒಪ್ಪಿಸಿದರು. 3 ವಿಕೆಟ್ ಪಡೆದ ಮೊಹ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.








