Ind vs New : ಭಾರತಕ್ಕೆ ಅಮೋಘ ಜಯ..!!
ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರ ದ್ವಿಶತಕ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಮಾರಕ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 12 ರನ್ಗಳ ರೋಚಕ ಗೆಲುವು ದಾಖಲಿಸಿದೆ.
ಹೈದ್ರಾಬಾದ್ನ ಉಪ್ಪಾಳ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ
ಕ್ರಿಕೆಟ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಕಲೆ ಹಾಕಿತು. ನ್ಯೂಜಿಲೆಂಡ್ 49.2 ಓವರ್ಗಳಲ್ಲಿ 337 ರನ್ಗಳಿಗೆ ಆಲೌಟ್ ಆಯಿತು.
ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ (34 ರನ್, 4 ಬೌಂಡರಿ, 2 ಸಿಕ್ಸರ್) ಮತ್ತು ಶುಭಮನ್ ಗಿಲ್ (149 ರನ್, 19 ಬೌಂಡರಿ 9 ಸಿಕ್ಸರ್) ಮೊದಲ ವಿಕೆಟ್ಗೆ 60 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.
ನಂತರ 87 ಎಸೆತದಲ್ಲಿ ಶತಕ ಸಿಡಿಸಿದರು. ಏಕದಿನ ಕ್ರಿಕೆಟ್ನಲ್ಲಿ 3ನೇ ಶತಕ ಸಿಡಿಸಿದ ಸಾಧನೆ ಮಾಡಿದರು.
200 ರನ್ಗಳ ಸಮೀಪವಿದ್ದಾಗ ಶುಭಮನ್ 48ನೇ ಓವರ್ನಲ್ಲಿ 2 ಸಿಕ್ಸರ್ ಸಿಡಿಸಿದ್ದರು. ನಂತರ ವೇಗಿ ಫಗ್ರ್ಯೂಸನ್ ಅವರ 49ನೇ ಓವರ್ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಜೊತೆಗೆ ದ್ವಿಶತಕ ಶತಕ ಪೂರೈಸಿದರು.
ನಂತರ ಶಿಪ್ಲಿ ಎಸೆತದಲ್ಲಿ ಶುಭಮನ್ ಫಿಲೀಪ್ಸ್ಗೆ ಕ್ಯಾಚ್ ನೀಡಿ ಹೊರ ನಡೆದರು. ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ 30ಕ್ಕೆ 2, ಹೆನ್ರಿ ಶಿಪ್ಲೆ 74ಕ್ಕೆ 2, ಲಾಕಿ ಫಗ್ರ್ಯೂಸನ್ 77ಕ್ಕೆ1, ಬ್ಲೇರ್ ಟಿಕ್ನರ್ 69ಕ್ಕೆ 1, ಮಿಚೆಲ್ ಸ್ಯಾಂಟ್ನರ್ 56ಕ್ಕೆ 1 ವಿಕೆಟ್ ಪಡೆದರು.
350 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ವೇಗಿಗಳ ದಾಳಿಗೆ ತತ್ತರಿಸಿತು. ಆರಂಭಿಕ ಬ್ಯಾಟರ್ ಫಿನ್ ಅಲೆನ್ 40, ಡೆವೊನ್ ಕಾನ್ವೆ 10, ಹೆನ್ರಿ ನಿಕೊಲೊಸ್ 18, ಡ್ಯಾರಿಲ್ ಮಿಚೆಲ್ 9, ನಾಯಕ ಟಾಮ್ ಲಾಥಮ್ 24 ರನ್ ಗಳಿಸಿದರು.
131 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೈಕಲ್ ಬ್ರೇಸ್ವೆಲ್ ಜೊತೆಗೂಡಿದ ನಾಯಕ ಮಿಚೆಲ್ ಸ್ಯಾಂಟ್ನರ್ 7ನೇ ವಿಕೆಟ್ಗೆ 162 ರನ್ ಸೇರಿಸಿ ಪಂದ್ಯದ ಗತಿ ಬದಲಿಸಿದರು.
ಈ ವೇಳೆ ದಾಳಿಗಿಳಿದ ವೇಗಿ ಮೊಹ್ಮದ್ ಸಿರಾಜ್ ಮಿಚೆಲ್ ಸ್ಯಾಂಟ್ನರ್ (57 ರನ್) ಮತ್ತು ಹೆನ್ರಿ ಶಿಪ್ಲೆ (0) ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಮೈಕಲ್ ಬ್ರೇಸ್ವೆಲ್ 57 ಎಸೆತದಲ್ಲಿ ಶತಕ ಪೂರೈಸಿದರು. ಲಾಕಿ ಫಗ್ರ್ಯೂಸನ್ 8 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಓವರ್ನಲ್ಲಿ 20 ರನ್ ಬೇಕಿದ್ದಾಗ ವೇಗಿ ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತವ್ನನು ಸಿಕ್ಸರ್ಗೆ ಅಟ್ಟಿದರು. ಮೂರನೆ ಎಸೆತದಲ್ಲಿ ಶಾರ್ದೂಲ್ ಬ್ರೇಸ್ವೆಲ್ ಅವರನ್ನು ಎಲ್ಬಿ ಮಾಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಭಾರತ ಪರ ಮೊಹ್ಮದ್ ಸಿರಾಜ್ 46ಕ್ಕೆ 4, ಕುಲ್ದೀಪ್ ಯಾದವ್ 43ಕ್ಕೆ 2, ಶಾರ್ದೂಲ್ 54ಕ್ಕೆ 2, ಶಮಿ 69ಕ್ಕೆ 1, ಹಾರ್ದಿಕ್ 70ಕ್ಕೆ 1 ವಿಕೆಟ್ ಪಡೆದರು.
ದ್ವಿಶತಕ ಸಿಡಿಸಿದ ಶುಭಮನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Ind vs New , team india win against newzealand








