Ind Vs Nz 1st Test Day 4 : ಕಿವೀಸ್ ಗೆ ಗೆಲ್ಲಲು 284 ರನ್ ಗುರಿ India saaksha tv
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 234/7ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ನ್ಯೂಜಿಲೆಂಡ್ ಗೆಲ್ಲಲು 284 ರನ್ ಗುರಿ ನೀಡಿದೆ.
ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಗೆ ಭಾರತದ ಸ್ಪಿನ್ನರ್ ಅಶ್ವಿನ್ ಶಾಕ್ ನೀಡಿದ್ದಾರೆ. 2 ರನ್ ಗಳಿಸಿದ್ದ ವಿಲ್ ಯಂಗ್, ಅಶ್ವಿನ್ ರ ಎಲ್ ಬಿಗೆ ಬಿದ್ದಿದ್ದಾರೆ.
ಇದಕ್ಕೂ ಮುನ್ನ 78 ರನ್ ಮುನ್ನಡೆಯೊಂದಿಗೆ ನಾಲ್ಕನೇ ದಿನದ ಆರಂಭಿಸಿ ಭಾರತ ಆರಂಭದಿಂದಲೇ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು.
ಪೂಜಾರಾ(22), ರಹಾನೆ (4), ಮಯಾಂಕ್ ( 17), ಜಡೇಜಾ ಶೂನ್ಯಕ್ಕೆ ಔಟ್ ಆದರು.
ಈ ಹಂತದಲ್ಲಿ ಕ್ರೀಸ್ ಕಚ್ಚಿನಿಂತ ಶ್ರೇಯಸ್ ಅಯ್ಯರ್ ಹಾಗೂ ಅಶ್ವಿನ್ ಎಚ್ಚರಿಕೆಯ ಆಟವಾಡಿದರು.
ಈ ಹಂತದಲ್ಲಿ ರಕ್ಷಣಾತ್ಮ ಆಟವಾಡುತ್ತಿದ್ದ ಅಶ್ವಿನ್ ಜೆಮಿನ್ಸನ್ ಓವರ್ ನಲ್ಲಿ ಕ್ಲೀನ್ ಬೌಲ್ಡ್ ಆದರು.
ಬಳಿಕ ಶ್ರೇಯಸ್ ಜೊತೆ ಸೇರಿದ ವೃದ್ಧಿಮಾನ್ ಸಹಾ ಭಾರತದ ರನ್ ವೇಗವನ್ನು ಹೆಚ್ಚಿಸಿದರು.
ಹಾಗೇ ತಂಡ 200ರ ಗಡಿ ದಾಡುವಂತೆ ಮಾಡಿದರು. ಅಂತಿಮವಾಗಿ ಅಯ್ಯರ್ 65 ರನ್ ಗಳಿಸಿ ಔಟ್ ಆದ್ರೆ, ಸಹಾ ಅಜೇಯ 61 ರನ್, ಅಕ್ಸರ್ ಅಜೇಯ 28 ರನ್ ಗಳಿಸಿದರು.
ತಂಡದ ಮೊತ್ತ 234 ರನ್ ಇದ್ದಾಗ ರಹಾನೆ ಡಿಕ್ಲೇರ್ ಮಾಡಿಕೊಂಡರು.









