Ind Vs Pak : ಮಹತ್ವದ ಟೈಂನಲ್ಲಿ ಕ್ಯಾಚ್ ಮಿಸ್… ಅರ್ಷ್ ದೀಪ್ ಮೇಲೆ ರೋಹಿತ್ ಫೈರ್
ಏಪ್ಯಾಕಪ್ ನ ಸೂಪರ್ 4 ರ ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾ ಸೋಲು ಕಂಡಿದೆ. ದಾಯಾದಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಅನೂಹ್ಯವಾಗಿ ಸೋಲುಂಡಿದೆ.
ಭಾರತ ತಂಡದ ಬ್ಯಾಟರ್ ಗಳ ಉತ್ತಮ ಪ್ರದರ್ಶನದ ಹೊರತಾಗಿಯೂ ಬೌಲರ್ ಗಳ ವೈಫಲ್ಯದಿಂದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಮುಖ್ಯವಾಗಿ ಪಾಕಿಸ್ತಾನ್ ಇನ್ನಿಂಗ್ಸ್ ನ 18 ನೇ ಓವರ್ ನಲ್ಲಿ ಅರ್ಷ್ ದೀಪ್ ಸಿಂಗ್ ಕೈಚೆಲ್ಲಿದ ಕ್ಯಾಚ್ ನಿಂದಲೇ ರೋಹಿತ್ ಶರ್ಮಾ ಸೇನೆ ಸೋಲು ಕಾಣಬೇಕಾಯ್ತು.
ಅರ್ಷ್ ದೀಪ್ ತಪ್ಪಿನಿಂದ ಕ್ರೀಸ್ ನಲ್ಲಿ ಉಳಿದುಕೊಂಡ ಪಾಕ್ ಆಟಗಾರ ಅಸಿಫ್ ಅಲಿ.. ಆ ನಂತರದ ಔವರ್ ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಸಿಕ್ಸ್, ಫೋರ್ ಸಿಡಿಸಿದ್ರು.

ಇನ್ನು ಕೊನೆಯ ಓವರ್ ನಲ್ಲಿ ಅರ್ಷ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ಮತ್ತೊಮ್ಮೆ ಬೌಂಡರಿ ಬಾರಿಸಿ ಸಿಡಿಸಿದರು.
ಆ ನಂತರ ಕೊನೆಯ ಓವರ್ ನ ನಾಲ್ಕನೇ ಎಸೆತದಲ್ಲಿ ಅಸಿಫ್ ಅಲಿಯನ್ನ ಅರ್ಷ್ ದೀಪ್ ಔಟ್ ಮಾಡಿದ್ರೂ ಮ್ಯಾಚ್ ಭಾರತದ ಕೈಯಿಂದ ಜಾರಿಹೋಗಿತ್ತು.
ಕೊನೆಯ ಎರಡು ಎಸೆತಗಳಲ್ಲಿ ಪಾಕಿಸ್ತಾನ ತಂಡಕ್ಕೆ ಎರಡು ರನ್ ಗಳ ಅವಶ್ಯಕತೆ ಇತ್ತು. ಇಫ್ತಿಕರ್ ಅಹ್ಮದ್ ಆ ರನ್ ಗಳನ್ನು ಪೂರ್ತಿ ಮಾಡಿದ್ರು.
ಇನ್ನು ಮಹತ್ವದ ಸಮಯದಲ್ಲಿ ಅರ್ಷ್ ದೀಪ್ ಕ್ಯಾಚ್ ಮಿಸ್ ಮಾಡಿದ್ದಕ್ಕೆ ಭಾರತೀಯ ಅಭಿಮಾನಿಗಳು ತೀವ್ರ ನಿರಾಸೆಗೆ ಗುರಿಯಾದರು.
ಮೈದಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಜೋರಾಗಿ ಕಿರುಚಿದರು.
ನೀನ್ ಏನ್ ಮಾಡ್ದೆ ಎಂಬಂತೆ ರೋಹಿತ್ ಶರ್ಮಾ ಅರ್ಷ್ ದೀಪ್ ಮೇಲೆ ಜೋರಾಗಿ ಕಿರುಚುವ ಮೂಲಕ ಅಸಹನೆ ಹೊರಹಾಕಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.