Ind Vs Pak : ಪಂದ್ಯ ಸೋಲಿನ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು ?
ಏಪ್ಯಾಕಪ್ ನ ಸೂಪರ್ 4 ರ ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾ ಸೋಲು ಕಂಡಿದೆ.
ದಾಯಾದಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಅನೂಹ್ಯವಾಗಿ ಸೋಲುಂಡಿದೆ.
ಭಾರತ ತಂಡದ ಬ್ಯಾಟರ್ ಗಳ ಉತ್ತಮ ಪ್ರದರ್ಶನದ ಹೊರತಾಗಿಯೂ ಬೌಲರ್ ಗಳ ವೈಫಲ್ಯದಿಂದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 181 ರನ್ ಗಳಿಸಿತು.
ಪಂದ್ಯ ಗೆಲ್ಲಲು 182 ರನ್ ಗಳ ಗುರಿಯನ್ನ ಬೆನ್ನಟ್ಟಿದ ಪಾಕಿಸ್ತಾನ ಕೊನೆಯ ಓವರ್ ನಲ್ಲಿ ಗೆಲುವಿನ ದಡ ಸೇರಿತು.
18 ನೇ ಓವರ್ ನಲ್ಲಿ ಅರ್ಷ್ ದೀಪ್ ಸಿಂಗ್ ಕ್ಯಾಚ್ ಕೈ ಚೆಲ್ಲಿದ್ದು, ಪಂದ್ಯಕ್ಕೆ ಟ್ವಿಸ್ಟ್ ನೀಡಿತು. ಪರಿಣಾಮ ಟೀಂ ಇಂಡಿಯಾ ಪಂದ್ಯ ಸೋಲಬೇಕಾಯ್ತು.

ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಪಾಕಿಸ್ತಾನ ತಂಡದ ಆಟಗಾರರು ಉತ್ತಮ ಕ್ರಿಕೆಟ್ ಆಡಿದರು. ಈ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತೇವೆ.
ಪಾಕ್ ತಂಡದಲ್ಲಿ ಕ್ಲಾಸ್ ಆಟಗಾರರಿದ್ದಾರೆ. ಸಮಯ ಬಂದಾಗ ಅವರು ತನ್ನ ಸಾಮರ್ಥ್ಯವನ್ನು ಸಾಭೀತು ಪಡಿಸುತ್ತಾರೆ. ಇದರಿಂದ ಯಾವುದೇ ಅಚ್ಚರಿ ಇಲ್ಲ.
ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪಿಚ್ ಬ್ಯಾಟಿಂಗ್ ಗೆ ಸಹಾಯ ಮಾಡುತ್ತದೆ ಎಂದು ಗೊತ್ತಿತ್ತು. ಆದ್ರೆ 180 ರನ್ ಗಳನ್ನು ಗಳಿಸುವುದು ದೊಡ್ಡ ವಿಷಯವೇನು ಅಲ್ಲ. ನಾವು ಉತ್ತಮ ರನ್ ಗಳನ್ನು ಗಳಿಸಿದ್ದೇವು. ಆದ್ರೆ ಅದನ್ನ ಕಾಪಿಟ್ಟುಕೊಳ್ಳುವಲ್ಲಿ ವಿಫಲರಾದ್ವಿ ಎಂದಿದ್ದಾರೆ ರೋಹಿತ್ ಶರ್ಮಾ.