ಗುವಾಹಟಿ ವೇದಿಕೆಯಾಗಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ.
ಈ ಪಂದ್ಯದಲ್ಲಿ ಗೆದ್ದು ಸರಣಿ ಕೈ ವಶ ಮಾಡಿಕೊಳ್ಳುವ ತವಕದಲ್ಲಿದೆ.
ಮತ್ತೊಂದು ಕಡೆ ಮೊದಲ ಪಂದ್ಯದಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ತಂಡ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಸಮ ಬಲ ಸಾಧಿಸುವ ತವಕದಲ್ಲಿದೆ.

ಈ ಪಂದ್ಯದಲ್ಲಿ ಭೀಕರ ಫಾರ್ಮ್ ನಲ್ಲಿರುವ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಈ ಪಂದ್ಯದಲ್ಲಿ 24 ರನ್ ಗಳನ್ನು ಗಳಿಸಿದ್ರೆ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ 1000 ರನ್ ಗಳ ಗಡಿ ದಾಟಲಿದ್ದಾರೆ.
ಇದಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರು ಕ್ಯಾಚ್ ಗಳನ್ನು ಹಿಡಿದರೇ ಅಂತರಾಷ್ಟ್ರೀಯ ಟಿ 20 50 ಕ್ಯಾಚ್ ಗಳನ್ನು ಹಿಡಿದ ಸಾಧನೆ ಮಾಡಲಿದ್ದಾರೆ.
ಇನ್ನು ರಿಷಬ್ ಪಂತ್ 66 ರನ್ ಗಳಿಸಿದ್ರೆ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಒಂದು ಸಾವಿರ ಗಡಿದಾಟಿದ ಸಾಧನೆ ಮಾಡಲಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಪ್ಲಾನ್ ನಲ್ಲಿ ಟೀಂ ಇಂಡಿಯಾ ಇದೆ. ಆದ್ರೆ ಇಂದಿನ ಪಂದ್ಯಕ್ಕೆ ವರುಣನ ಕಾಟ ಎದುರಾಗುವ ಸಾಧ್ಯತೆಗಳಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಸುರಿಯುವ ಸೂಚನೆ ಇದೆ. ಅಂದಹಾಗೆ ಇಂದಿನ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ. 39,000 ಪ್ರೇಕ್ಷಕರು ವೀಕ್ಷಿಸಬಹುದಾದ ಸಾಮರ್ಥ್ಯದ ಸ್ಟೇಡಿಯಂ ಭರ್ತಿಯಾಗಿದೆ.
ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಅರ್ಷ್ ದೀಪ್ ಸಿಂಗ್, ದೀಪಕ್ ಚಹಾರ್, ಹರ್ಷಲ್ ಪಟೇಲ್