ಆಫ್ರಿಕಾದ ಆ ಪಿಚ್ ನಲ್ಲಿ ಭಾರತ ಸೋಲೇ ಕಂಡಿಲ್ಲ..

1 min read
rahul Dravid saaksha tv

ಆಫ್ರಿಕಾದ ಆ ಪಿಚ್ ನಲ್ಲಿ ಭಾರತ ಸೋಲೇಕಂಡಿಲ್ಲ..

ಸೆಂಚುರಿಯನ್‌ನಿಂದ ಜೋಹಾನ್ಸ್‌ಬರ್ಗ್‌ಗೆ ಕೇವಲ 41 ಕಿಲೋಮೀಟರ್ ದೂರ, ಆದರೆ… ಈ ಪಯಣದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಸಿಕ್ಕ ಯಶಸ್ಸಿಗೆ ಬೆಲೆಕಟ್ಟಲಾಗದು.

ಡಿಸೆಂಬರ್ 30ರವರೆಗೆ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಕೊಹ್ಲಿ ಸೇನೆ ಗೆದ್ದುಕೊಂಡಿದ್ದು, ಏಷ್ಯಾದ ಯಾವ ತಂಡವೂ ಸಾಧಿಸದ ಸಾಧನೆ ಮಾಡಿದೆ.

ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇದೀಗ ಎರಡನೇ ಟೆಸ್ಟ್ ಗಾಗಿ ವಾಂಡರರ್ಸ್‌ಗೆ ಪಯಣಿಸಿದೆ ಭಾರತ.  ಈ ಮೈದಾನದಲ್ಲಿ ಈವರೆಗೂ ಟೀಂ ಇಂಡಿಯಾ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ.

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಜನವರಿ 3 ರಂದು ಆರಂಭವಾಗಲಿದೆ.

ಜೋಹಾನ್ಸ್‌ಬರ್ಗ್‌ನಲ್ಲಿರುವ ದಾಖಲೆಯನ್ನು ಟೀಂ ಇಂಡಿಯಾ ಉಳಿಸಿಕೊಂಡರೆ ಹೊಸದೊಂದು ಸೃಷ್ಟಿಯಾಗುವುದು ಖಚಿತ.

ಸಫಾರಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ  ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.

johannesburg saakshatv

ವಾಂಡರರ್ಸ್ ನಲ್ಲಿ ಟೀಂ ಇಂಡಿಯಾ ಟೆಸ್ಟ್ ದಾಖಲೆ!

ಭಾರತ ಈ ಮೈದಾನದಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿದೆ. 2 ಟೆಸ್ಟ್ ಗಳನ್ನು ಗೆದ್ದು.. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಈ ಪಿಚ್ ನಲ್ಲಿ ಈಗಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇಬ್ಬರಿಗೂ ಈ ಮೈದಾನ ಲಕ್ಕಿ ಪಿಚ್ ಆಗಿದೆ.

1997ರ ಸರಣಿಯ ಭಾಗವಾಗಿ ದ್ರಾವಿಡ್ ಇಲ್ಲಿ 148 ರನ್ ಗಳಿಸಿ ಮಿಂಚಿದ್ದರು. ಅವರು  ಟೀಂ ಇಂಡಿಯಾದ ನಾಯಕರಾಗಿದ್ದಾಗ 2006 ರಲ್ಲಿ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಗೆದ್ದಿದ್ದರು.  ಈ ಪಂದ್ಯವನ್ನು ಭಾರತ 123 ರನ್‌ಗಳಿಂದ ಗೆದ್ದುಕೊಂಡಿತು.

ವಿರಾಟ್ ಕೊಹ್ಲಿಗೂ  ಈ ಮೈದಾನ ಅದೃಷ್ಠದ ಪಿಚ್ ಆಗಿದ್ದು,  ನಾಯಕನಾಗಿ  2018 ರಲ್ಲಿ ಸೌತ್ ಆಫ್ರಿಕಾ ತಂಡವನ್ನು ಮೊದಲ ಬಾರಿಗೆ ಸೋಲಿಸಿದ್ದರು.

”ಮೊದಲ ಟೆಸ್ಟ್ ಗೆದ್ದು, ಉತ್ಸಾಹದಲ್ಲಿರುವ  ಕೊಹ್ಲಿ ಸೇನೆ ವಾಂಡರರ್ಸ್‌ನಲ್ಲಿ ಹೆಚ್ಚಿನ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯುವುದರಲ್ಲಿ ಸಂದೇಹವಿಲ್ಲ.

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd