IND vs SA : ರಿಷಬ್ ಪಂತ್ ಕ್ಯಾಪ್ಟನ್ಸಿ ಬಗ್ಗೆ ಭುವಿ ಹೇಳಿದ್ದೇನು..?
ಇಂಡೋ – ಆಫ್ರಿಕಾ ನಡುವಿನ ಟಿ 20 ಸರಣಿಯ ಭಾಗವಾಗಿ ದೆಹಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋತಿದ್ದು ಗೊತ್ತೇ ಇದೆ.
212 ರನ್ ಗಳ ಬೃಹತ್ ಗುರಿಯನ್ನು ಉಳಿಸಿಕೊಳ್ಳಲು ಟೀಂ ಇಂಡಿಯಾ ಬೌಲರ್ ಗಳು ವಿಫಲರಾದರು.
ಇನ್ನು ಇದೇ ಮೊದಲ ಬಾರಿಗೆ ರಿಷಬ್ ಪಂತ್ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.
ಆದರೆ, ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿಯೇ ಪಂತ್ ನಿರಾಸೆ ಅನುಭವಿಸಿದ್ದಾರೆ.
ಹೀಗಾಗಿ ರಿಷಬ್ ಪಂತ್ ಕ್ಯಾಪ್ಟನ್ಸಿ ಬಗ್ಗೆ ಕೆಲವು ಟೀಕೆಗಳನ್ನು ಮಾಡುತ್ತಿದ್ದಾರೆ.
ಈ ಅನುಕ್ರಮದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಪಂತ್ ಅವರನ್ನು ಬೆಂಬಲಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಬೌಲರ್‌ಗಳ ವೈಫಲ್ಯದ ಹೊರತಾಗಿಯೂ.. ಎರಡನೇ ಟಿ20ಯಲ್ಲಿ ತಮ್ಮ ಬೌಲರ್‌ಗಳು ಸ್ಟ್ರಾಂಗ್ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಭುವನೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆತ ಯಂಗ್ ಕ್ಯಾಪ್ಟನ್, ಅದೇ ರೀತಿ ಕ್ಯಾಪ್ಟನ್ ಆಗಿ ಪಂತ್ ಗೆ ಮೊದಲ ಅಂತರಾಷ್ಟ್ರೀಯ ಪಂದ್ಯವಾಗಿತ್ತು.
ಸರಣಿಯಲ್ಲಿ ಮುಂದಿನ ಪಂದ್ಯದಲ್ಲಿ ಪಂತ್ ನಾಯಕರಾಗಿ ಮಿಂಚಲಿದ್ದಾರೆ. ಕೇವಲ ಕ್ಯಾಪ್ಟನ್ ಒಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ.
ತಂಡ ಒಟ್ಟಾಗಿ ಮಿಂಚಿದ್ರೆ ಗೆಲುವು ಸಾಧಿಸುತ್ತೇವೆ. ಮೊದಲ ಪಂದ್ಯದಲ್ಲಿ ನಮ್ಮ ಬೌಲಿಂಗ್ ವಿಭಾಗ ತೀವ್ರ ನಿರಾಸೆ ಅನುಭವಿಸಿತ್ತು.
ನಾವು ಉತ್ತಮವಾಗಿ ಬೌಲಿಂಗ್ ಮಾಡಿ ತಂಡವನ್ನು ಗೆಲ್ಲಿಸಿದ್ದರೆ.. ಎಲ್ಲರೂ ಪಂತ್ ನಿರ್ಣಾಯಗಳನ್ನು ಹೊಗಳುತ್ತಿದ್ದರು.
ಆದ್ರೂ ಮುಂದಿನ ಪಂದ್ಯದಲ್ಲಿ ನಮ್ಮ ಬೌಲರ್ ಗಳು ಉತ್ತಮವಾಗಿ ಕಮ್ ಬ್ಯಾಕ್ ಮಾಡುತ್ತೇವೆ ಎಂದು ಭುವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.