ಟೆಸ್ಟ್ ಗೆಲ್ಲಲಿಲ್ಲ.. ಏಕದಿನ ಗೆಲ್ಲಲು ಟೀಂ ಇಂಡಿಯಾ ಕಸರತ್ತು

1 min read
ind-vs-sa-odi-series team india practice saaksha tv

ಟೆಸ್ಟ್ ಗೆಲ್ಲಲಿಲ್ಲ.. ಏಕದಿನ ಗೆಲ್ಲಲು ಟೀಂ ಇಂಡಿಯಾ ಕಸರತ್ತು

ಟೆಸ್ಟ್ ಸರಣಿಯ ಸೋಲಿನಿಂದ ಟೀಂ ಇಂಡಿಯಾ ನಿರಾಸೆಗೊಂಡಿದ್ದು, ಏಕದಿನ ಸರಣಿಯತ್ತ ಚಿತ್ತ ಹರಿಸಿದೆ.

ನವರಿ 19ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ.

ಈಗಾಗಲೇ ದಕ್ಷಿಣ ಆಫ್ರಿಕಾ ತಲುಪಿರುವ ಏಕದಿನ ತಂಡ ನೆಟ್ಸ್ ನಲ್ಲಿ ಬೆವರಿಳಿಸುತ್ತಿದೆ.

ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ದಿನ.. ಹುಡುಗರೊಂದಿಗೆ ಕಠಿಣ ತರಬೇತಿ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಭುವನೇಶ್ವರ್ ಕುಮಾರ್, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಇಶನ್ ಕಿಶನ್, ಪ್ರಸಿದ್ಧ್ ಕೃಷ್ಣ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್ ಮುಂತಾದವರು ಧವನ್ ಜೊತೆಗಿನ ಫೋಟೋಗೆ ಪೋಸ್ ನೀಡಿದ್ದಾರೆ. ಅದೀಗ ವೈರಲ್ ಆಗುತ್ತಿದೆ.

ಏಕದಿನ ಸರಣಿಯ ಭಾಗವಾಗಿ ಜನವರಿ 19, 21 ಮತ್ತು 23 ರಂದು ಮೂರು ಪಂದ್ಯಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಕಳೆದುಕೊಂಡರೂ, ಕೊಹ್ಲಿ ಪಡೆ ODI ಸರಣಿಯಲ್ಲಿ (4-1) ವಿಜಯಶಾಲಿಯಾಗಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd