Ind VS SA : ಟೀಮ್ ಇಂಡಿಯಾಕ್ಕೆ 2ನೇ ಪಂದ್ಯದಲ್ಲಿ ಅಗ್ನಿ ಪರೀಕ್ಷೆ
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ರಿಷಬ್ ಪಂತ್ ಬಳಗ ಹೀನಾಯವಾಗಿ ಸೋಲು ಕಂಡಿದೆ.
ವಿಶ್ವದಾಖಲೆ ನಿರ್ಮಿಸುವಂತಹ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಇತ್ತ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿಯೇ ಸೋಲು ಕಂಡಿದ್ದು, ಪಂತ್ ಗೆ ನಿರಾಸೆಯನ್ನುಂಟು ಮಾಡಿದೆ.
ಹೀಗಾಗಿ ಮೊದಲ ಪಂದ್ಯದಲ್ಲಿ ಉಂಟಾಗಿರುವ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಕಟಕ್ ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಕಂ ಬ್ಯಾಕ್ ಮಾಡುವ ನಿರೀಕ್ಷೆ ಇದೆ.
ಸತತ 12 ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಸೋತ ಮೇಲೆ ಸೋಲಿಲ್ಲದ ಸರಪಳಿ ತುಂಡಾಗಿದೆ.
ದಕ್ಷಿಣ ಆಫ್ರಿಕಾಗೆ ತವರಿನಲ್ಲಿ ಟೀಂ ಇಂಡಿಯಾ ಕಬ್ಬಣದ ಕಡಲೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಅದ್ರೆ ಆ ನಿರೀಕ್ಷೆ ಹುಸಿಯಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾಗಿಂತ ದಕ್ಷಿಣ ಆಫ್ರಿಕಾ ತಂಡ ಸಾಲಿಡ್ ಆಗಿದೆ ಅನ್ನೋದು ಮೊದಲ ಪಂದ್ಯದಲ್ಲಿಯೇ ಗೊತ್ತಾಗಿದೆ.
ಆದರೆ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ತನ್ನ ಶಕ್ತಿ ಪ್ರದರ್ಶನಕ್ಕೆ ಅವಕಾಶವಿದೆ. ವೈಫಲ್ಯ ಮೊದಲ ಪಂದ್ಯಕ್ಕೆ ಮಾತ್ರ ಸೀಮಿತ ಅನ್ನುವುದನ್ನು ತೋರಿಸಲು ವೇದಿಕೆಯಾಗಿದೆ.

ಕಟಕ್ನ ಭಾರಾಮತಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮುನ್ನ ಟೀಮ್ಇಂಡಿಯಾ ಬೌಲಿಂಗ್ ವಿಭಾಗವನ್ನು ಬಲಪಡಿಸಬೇಕಿದೆ.
ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ತಂಡದಲ್ಲಿ ಉಳಿಸಿಕೊಳ್ಳುವ ಪ್ಲಾನ್ ಮಾಡಿದರೆ ಔಟ್ ಅಂಡ್ ಔಟ್ ವೇಗಕ್ಕಾಗಿ ಆವೇಶ್ ಖಾನ್ ಬದಲಿಗೆ ಉಮ್ರನ್ ಮಲಿಕ್ರನ್ನು ಆಡಿಸಿಕೊಳ್ಳಬೇಕಿದೆ. ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಶಕ್ತಿಯನ್ನು ಬಳಸಿಕೊಳ್ಳಬೇಕಾಗಿದೆ.
ಸ್ಪಿನ್ ವಿಭಾಗಕ್ಕೆ ಹೆಚ್ಚು ಬಲ ಬೇಕಿದೆ. ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಎಡಗೈ ಬ್ಯಾಟ್ಸ್ಮನ್ಗಳ ಸಂಖ್ಯೆ ಹೆಚ್ಚಿರುವುದರಿಂದ ಒಬ್ಬ ಆಫ್ ಸ್ಪಿನ್ನರ್ಗಾಗಿ ಹುಡುಕಾಟ ನಡೆಸಬೇಕಿದೆ.
ಹೀಗಾಗಿ ಯಜುವೇಂದ್ರ ಚಹಲ್ ಲೆಗ್ ಸ್ಪಿನ್ನರ್ ಆಗಿರುವುದರಿಂದ ಎಡಗೈ ಬ್ಯಾಟ್ಸ್ಮನ್ಗಳಿಗೆ ಟಾರ್ಗೆಟ್ ಆಗುತ್ತಿದ್ದಾರೆ.
ಅಷ್ಟೇ ಅಲ್ಲದೆ ಚಹಲ್ ಗೂಗ್ಲಿ ಎಸೆಯುತ್ತಿಲ್ಲ. ಹೀಗಾಗಿ ಗೂಗ್ಲಿ ಸ್ಪೆಷಲಿಸ್ಟ್ ರವಿ ಬಿಷ್ಣೋಯಿಗೆ ಸ್ಥಾನ ಕೊಡಬಹುದು.
ಕಟಕ್ ಪಿಚ್ ಬಗ್ಗೆಯೂ ಟೀಮ್ ಇಂಡಿಯಾ ಅಧ್ಯಯನ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾಡು ಇಲ್ಲವೆ ಮಡಿ ಮನಸ್ಥಿತಿಯಲ್ಲಿ ಆಡಿದರೆ ಉತ್ತಮ ಫಲಿತಾಂಶ ಸಾಧ್ಯ.








