ವೈಟ್ ವಾಶ್ ಬಳಿಕ ಟೀಂ ಇಂಡಿಯಾಗೆ ಮತ್ತೊಂದು ಶಾಕ್
ಈ ವರ್ಷದ ಆರಂಭದಿಂದಲೂ ಟೀಂ ಇಂಡಿಯಾಗೆ ಸತತ ಹೊಡೆತಗಳು ಬೀಳುತ್ತಲೇ ಇವೆ.
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿರುವ ಭಾರತ ತಂಡ, ಏಕದಿನ ಸರಣಿಯಲ್ಲೂ ಅತ್ಯಂತ ಹೀನಾಯ ಸೋಲು ಕಂಡಿದೆ.
ರೋಚಕ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 4 ರನ್‌ಗಳಿಂದ ಜಯ ಸಾಧಿಸಿದೆ.
ಈ ಸೋಲಿನಿಂದ ಹತಾಶೆಗೊಂಡಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ.
ನಿಧಾನಗತಿಯ ಓವರ್ ರೇಟ್‌ಗಾಗಿ ಐಸಿಸಿ ರಾಹುಲ್ ಸೇನೆಗೆ ಭಾರಿ ದಂಡ ವಿಧಿಸಿದೆ. ಪಂದ್ಯ ಶುಲ್ಕದಲ್ಲಿ 40 ಪ್ರತಿಶತ ಕಡಿತವಾಗಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ನಿರ್ದೇಶಿತ ಸಮಯದಲ್ಲಿ ಓವರ್ ಮುಕ್ತಾಯಗೊಳ್ಳಬೇಕು. ಒಂದು ವೇಳೆ ಹೆಚ್ಚಿನ ಸಮಯ ತೆಗೆದುಕೊಂಡರೇ ದಂಡಕ್ಕೆ ಗುರಿಯಾಗಬೇಕಾಗುತ್ತದೆ.
ಇನ್ನು ಈ ಬಾರಿಯ ದಕ್ಷಿಣ ಆಫ್ರಿಕಾ ಪ್ರವಾಸ ಭಾರತಕ್ಕೆ ಕಿಹಿಯನ್ನುಣಿಸಿದೆ. ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಒಟ್ಟು ಆರು ಪಂದ್ಯಗಳು ನಡೆದಿವೆ.. ಟೀಂ ಇಂಡಿಯಾ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿದೆ.