IND Vs SL T20 – ಏಷ್ಯಾಕಪ್ ನಲ್ಲಿ ಶುಭಾರಂಭ ಮಾಡಿದ ವನಿತೆಯರ ಭಾರತ…
ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಭಾರತ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು 41 ರನ್‌ಗಳಿಂದ ಅಮೋಘ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 150 ರನ್ ಗಳ ಟಾರ್ಗೇಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 18.2 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಸಲಷ್ಟೆ ಶಕ್ತವಾಯಿತು.
ಈ ಮೂಲಕ ಟೀಂ ಇಂಡಿಯಾ ಮಹಿಳೆಯರ ಏಷ್ಯಾಕಪ್ ನಲ್ಲಿ ಶೂಭಾರಂಭ ಮಾಡಿದೆ. ಭಾರತದ ಪರ ಬ್ಯಾಟಿಂಗ್‌ನಲ್ಲಿ ಜೆಮಿಮಾ ರೋಡ್ರಿಗಸ್ 76 ರನ್ ಗಳಿಸಿ ಮಿಂಚಿದರು. ಬೌಲಿಂಗ್ ನಲ್ಲಿ ಹೇಮಲತಾ ಮೂರು ವಿಕೆಟ್ ಪಡೆದು ಮಿಂಚಿದರೆ, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದು ಬೀಗಿದರು.
ಶ್ರೀಲಂಕಾ ನಾಯಕ ಚಾಮರಿ ಅಟಪಟ್ಟು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭದಲ್ಲೇ ಕುಸಿತ ಕಂಡಿತು. ಶೆಫಾಲಿ ವರ್ಮಾ 10 ರನ್ ಗಳಿಸಿ ಔಟಾದಾರೆ ಸ್ಮೃತಿ ಮಂಧಾನ ಆರು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಈ ಜೋಡಿ 23 ರನ್ ಗಳಿಸಿ ಔಟಾಯಿತು. ಇದಾದ ಬಳಿಕ ಜೆಮಿಮಾ ರೋಡ್ರಿಗಸ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 92 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ದರು. ಹರ್ಮನ್‌ಪ್ರೀತ್ 33 ಮತ್ತು ಜೆಮಿಮಾ 76 ರನ್ ಗಳಿಸಿದರು. ಅಂತಿಮವಾಗಿ ರಿಚಾ ಘೋಷ್ ಒಂದು ಸಿಕ್ಸರ್ ನೆರವಿನಿಂದ ಭಾರತದ ಸ್ಕೋರನ್ನು ಆರು ವಿಕೆಟ್ ನಷ್ಟಕ್ಕೆ 150ಕ್ಕೆ ಪೇರಿಸಿದರು.
ರಣಸಿಂಘೆ ಶ್ರೀಲಂಕಾ ಪರ ಗರಿಷ್ಠ ಮೂರು ವಿಕೆಟ್ ಪಡೆದರು. ನಾಯಕಿ ಅಟಪಟ್ಟು ಮತ್ತು ಸುಗಂದಿಕಾ ಕುಮಾರಿ ತಲಾ ಒಂದು ವಿಕೆಟ್ ಪಡೆದರು.
ಶ್ರೀಲಂಕಾ ಬ್ಯಾಟಿಂಗ್ ವಿಫಲ
151 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡದ ಆರಂಭವೂ ಸಹ ಕಳಪೆಯಾಗಿತ್ತು. ನಾಯಕಿ ಅಟಪಟ್ಟು ಕೇವಲ ಐದು ರನ್ ಗಳಿಸಿ ಔಟಾದರು. ಇದಾದ ನಂತರ ಶ್ರೀಲಂಕಾದ ವಿಕೆಟ್‌ಗಳು ನಿಯಮಿತವಾಗಿ ಬೀಳುತ್ತಲೇ ಇದ್ದವೂ. ಇಡೀ ತಂಡದಲ್ಲಿ ಕೇವಲ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ದಾಟಿದರು. ಹಾಸಿನಿ ಪೆರೇರಾ ಗರಿಷ್ಠ 30 ರನ್ ಗಳಿಸಿದರು. ಹರ್ಷಿತಾ ಮಾಧವಿ 26 ರನ್ ಮತ್ತು ರಣಸಿಂಗೆ 11 ರನ್ ಗಳಿಸಿದರು. ಅಂತಿಮವಾಗಿ ಶ್ರೀಲಂಕಾ ತಂಡವನ್ನು 18.2 ಓವರ್‌ಗಳಲ್ಲಿ 109 ರನ್‌ಗಳಿಗೆ ಅಲೌಟ್ ಆಯಿತು.
Add New Post ‹ Saaksha TV — WordPress