IND vs Sri : ಶನಕಾ ವಿರುದ್ಧ ರನೌಟ್ ಮನವಿ ವಾಪಸ್ ಪಡೆದು ಗಮನ ಸೆಳೆದ ರೋಹಿತ್..!!
IND vs Sri ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಲ್ಲರ ಗಮನ ಸೆಳೆದರು.
ಪಂದ್ಯ ಮುಗಿಯಲು ಒಂದು ಓವರ್ ಬಾಕಿ ಇರುವಾಗ ವೇಗಿ ಮೊಹ್ಮದ್ ಶಮಿ ಲಂಕಾ ನಾಯಕ ದಸುನ್ ಶನಕಾ ವಿರುದ್ಧ ಮಾಡಿದ್ದ ರನೌಟ್ ಮನವಿಯನ್ನು ವಾಪಸ್ ರೋಹಿತ್ ವಾಪಸ್ ತೆಗೆದುಕೊಂಡರು.
49.4 ಎಸೆತದಲ್ಲಿ ವೇಗಿ ನಾನ್ ಸ್ಟ್ರೈಕ್ ನಲ್ಲಿದ್ದ ನಾಯಕ ದಸುನ್ ಶನಕಾ ಅವರನ್ನು ಮಂಕಡಿಂಗ್ ಶೈಲಿಯಲ್ಲಿ ರನೌಟ್ ಮಾಡಿ ಅಂಪೈಯರ್ಗೆ ಮನವಿ ಸಲ್ಲಿಸಿದರು. ಮಧ್ಯೆ ಪ್ರವೇಶಿಸಿದ ರೋಹಿತ್ ಶರ್ಮಾ ಮನವಿಯನ್ನು ವಾಪಸ್ ತೆಗೆದುಕೊಂಡರು.
ನಂತರದ ಕೊನೆಯ 2 ಎಸೆತಗಳಲ್ಲಿ ಶನಕಾ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಶತಕ ಪೂರೈಸಿದರು.
ಈ ಘಟನೆ ಕುರಿತು ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಶನಕಾ 98 ರನ್ ಗಳಿಸಿದ್ದಾಗ ಆ ರೀತಿ ಔಟ್ ಮಾಡಲು ಮನಸ್ಸು ಬರಲಿಲಿಲ್ಲ. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು ಎಂದು ರೋಹಿತ್ ಶರ್ಮಾ ಮೆಚ್ಚುಗೆ ಸೂಚಿಸಿದರು.
IND vs Sri , dasun shanaka , Rohith Sharma ,