IND vs Sri : ಭಾರತ ಪ್ರಯಾಣ ಬೆಳೆಸಿದ ಶ್ರೀಲಂಕಾ ತಂಡ
ಟೀಮ್ ಇಂಡಿಯಾ ವಿರುದ್ಧ ಸೀಮತ ಓವರ್ಗಳ ಸರಣಿ ಆಡಲು ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ಪ್ರಯಾಣ ಬೆಳೆಸಿದೆ.
ಶ್ರೀಲಂಕಾ ತಂಡಕ್ಕೆ ವರ್ಷದ ಮೊದಲ ಸರಣಿ ಇದಾಗಿದೆ. ಜ.3ರಿಂದ ಟಿ20 ಸರಣಿ ಮೂಲಕ ಶನಕಾ ಪಡೆ ಪ್ರವಾಸ ಆರಂಭಿಸಲಿದೆ.ಜ.10ರಿಂದ ಜ.15ರವರೆಗೆ 3 ಏಕದಿನ ಪಂದ್ಯಗಳನ್ನು ಆಡಲಿದೆ.
ಶನಿವಾರ ಕೊಲಂಬೊಂದಿಂದ ಶನಕಾ ನೇತೃತ್ವದ ಲಂಕಾ ತಂಡ ಪ್ರಯಾಣ ಆರಂಭಿಸಿತು. ತಂಡದಲ್ಲಿ ದುಷ್ಮಾಂತಾ ಚಾಮೀರಾ ತಂಡದಿಂದ ಹೊರಗುಳಿದಿದ್ದಾರೆ. 20 ಆಟಗಾರರನ್ನೊಳಗೊಂಡ ತಂಡ ಸೀಮಿತ ಓವರ್ಗಳ ಸರಣಿಯನ್ನು ಆಡಲಿದೆ. ಮಿಸ್ಟ್ರ ಸ್ಪಿನ್ನರ ವನಿಂದು ಹಸರಂಗ ಅವರನ್ನು ತಂಡದ ಉಪನಾಯಕನಾಗಿ ನೇಮಿಸಲಾಗಿದೆ. ಏಕದಿನ ಕ್ರಿಕೆಟ್ನಲ್ಲಿ ಕುಸಾಲ್ ಮೆಂಡಿಸ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಶ್ರೀಲಂಕಾ ತಂಡ:ದಾಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಆವಿಷ್ಕಾ ಫೆರ್ನಾಂಡೊ,ಸಧೀರ ಸಮರವಿಕ್ರಮ, ಕುಸಾಲ್ ಮೆಂಡೀಸ್, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ, ಧನಂಜಯ ಡಿಸಿಲ್ವಾ, ವನಿಂದು ಹಸರಂಗ, ಮಹೀಶ್ ತೀಕ್ಷ್ಣ, ಜೆಫ್ರಿ ವಾಂಡರ್ಸ್, ಚಾಮಿಕಾ ಕರುಣಾರತ್ನೆ, ದಿಲ್ಶಾನ್ ಮಧುಶಂಕ,ಕಸುನ್ ರಜಿತ, ನುವಾನಿಡು ಫೆರ್ನಾಂಡೊ, ದುನಿತ್ ವೆಲಾಲಗೆ, ಪ್ರಮೋದ್ ಮಧುಶನ್,ಲಹಿರು ಕುಮಾರ್, ನುವಾನ್ ಕುರಶೇಕರ್ (ಟ20).