ind-vs-wi-1st-odi : ವೇಗವಾಗಿ 100 ವಿಕೆಟ್ ಪಡೆದ ಚಹಾಲ್
ಟೀಂ ಇಂಡಿಯಾದ 1000ನೇ ಪಂದ್ಯದಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಚಹಾಲ್ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ind-vs-wi-1st-odi- 100 ODI WICKETS for Chahal
ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಿಕೊಲಸ್ ಪೂರನ್ ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಚಾಹಲ್ ಭಾರತದ ಪರ ನೂರು ವಿಕೆಟ್ ಪಡೆದ 23ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಏಕದಿನ ಕ್ರಿಕೆಟ್ ನಲ್ಲಿ 59 ಪಂದ್ಯಗಳನ್ನಾಡಿದ್ದ ಚಹಾಲ್, 5.19 ಸರಾಸರಿಯಲ್ಲಿ 99 ವಿಕೆಟ್ ಪಡೆದಿದ್ದರು. ಇದರಲ್ಲಿ 2 ಬಾರಿ 5 ವಿಕೆಟ್ ಗೊಚ್ಚಲು ಪಡೆದಿದ್ದಾರೆ.
2 ಬಾರಿ ನಾಲ್ಕು ವಿಕೆಟ್ ಪಡೆದಿರುವ ಘನತೆಯೊಂದಿದ್ದಾರೆ. 42 ರನ್ ಕೊಟ್ಟು 6 ವಿಕೆಟ್ ಪಡೆದಿರುವುದು ಚಹಾಲ್ ಅವರ ಉತ್ತಮ ಸಾಧನೆಯಾಗಿದೆ.
ಇಂದು 60 ಪಂದ್ಯವನ್ನಾಡುತ್ತಿರುವ ಚಹಾಲ್, ಪೂರನ್ ವಿಕೆಟ್ ಪಡೆಯುವ ಮೂಲಕ 100 ವಿಕೆಟ್ ಸಾಧನೆ ಮಾಡಿದರು.
ಅಂದಹಾಗೆ ಭಾರತದ ಪರ ಅತಿ ವೇಗವಾಗಿ 100 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಚಹಾಲ್ ಐದನೇ ಸ್ಥಾನದಲ್ಲಿದ್ದಾರೆ.
ಭಾರತದ ಪರ ಅತಿವೇಗವಾಗಿ ನೂರು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ವೇಗಿ ಮೊಹ್ಮದ್ ಶಮಿ ಮೊದಲ ಸ್ಥಾನದಲ್ಲಿದ್ದಾರೆ. ಅವರು 56 ಪಂದ್ಯಗಳಲ್ಲಿ ನೂರು ವಿಕೆಟ್ ಸಾಧನೆ ಮಾಡಿದ್ದರು.
ಎರಡನೇ ಸ್ಥಾನದಲ್ಲಿ ವೇಗಿ ಬುಮ್ರಾ ಇದ್ದು, ಅವರು 57 ಪಂದ್ಯಗಳಲ್ಲಿ ನೂರರ ಸಾಧನೆ ಮಾಡಿದ್ದರು. ನಂತರ 58 ಪಂದ್ಯಗಳಲ್ಲಿ ಕುಲದೀಪ್ ಯಾದವ್, 59 ಪಂದ್ಯಗಳಲ್ಲಿ ಇರ್ಫಾನ್ ಪಠಾಣ್ ನೂರು ವಿಕೆಟ್ ಸಾಧನೆ ಮಾಡಿದ್ದರು.