IND Vs WI 1st ODI: ಚರಿತ್ರೆ ಸೃಷ್ಠಿಸಲಿದೆ ಟೀಂ ಇಂಡಿಯಾ
ಫೆಬ್ರವರಿ 6 ರಂದು ಮೊಟೆರಾ ಮೈದಾನದಲ್ಲಿ ವಿಂಡೀಸ್ ವಿರುದ್ಧದ ನಡೆಯುವ ಮೊದಲ ಏಕದಿನ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಇತಿಹಾಸ ನಿರ್ಮಿಸಲಿದೆ.
ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡಕ್ಕೆ ಸಾಧ್ಯವಾಗದ 1000ನೇ ಏಕದಿನ ಮೈಲುಗಲ್ಲು ಈ ಪಂದ್ಯದ ಮೂಲಕ ಭಾರತ ತಲುಪಲಿದೆ.
ಇದುವರೆಗೆ 999 ಏಕದಿನ ಪಂದ್ಯಗಳನ್ನಾಡಿರುವ ಭಾರತ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಹೊಸ ಅಧ್ಯಾಯ ಬರೆಯಲಿದೆ.
ಜನವರಿ 5, 1971 ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದೊಂದಿಗೆ ಆರಂಭವಾದ ಭಾರತ ತಂಡದ ಏಕದಿನ ಕ್ರಿಕೆಟ್ ಜರ್ನಿ ಇದೀಗ 1 ಸಾವಿರದ ಸನಿಹದಲ್ಲಿದೆ.
ಟೀಂ ಇಂಡಿಯಾ ಈವರೆಗೂ 999 ಪಂದ್ಯಗಳಲ್ಲಿ 518 ಗೆಲುವು ಮತ್ತು 431 ಸೋಲುಗಳನ್ನು ಕಂಡಿದೆ.
ಇನ್ನು ಅತಿ ಹೆಚ್ಚು ಏಕದಿನ ಪಂದ್ಯಗಳನ್ನಾಡಿರುವ ತಂಡಗಳ ಪಟ್ಟಿ ಹೀಗಿದೆ.

ಭಾರತ ( 999), ಆಸ್ಟ್ರೇಲಿಯಾ (958), ಪಾಕಿಸ್ತಾನ (936), ಶ್ರೀಲಂಕಾ (870), ವೆಸ್ಟ್ ಇಂಡೀಸ್ (834), ನ್ಯೂಜಿಲೆಂಡ್ (775), ಇಂಗ್ಲೆಂಡ್ (761), ದಕ್ಷಿಣ ಆಫ್ರಿಕಾ (638), ಜಿಂಬಾಬ್ವೆ (541) ಮತ್ತು ಬಾಂಗ್ಲಾದೇಶ (388) ನಂತರದ ಸ್ಥಾನದಲ್ಲಿವೆ.
ಗೆಲುವಿನ ಶೇಕಡಾವಾರು ಲೆಕ್ಕದಲ್ಲಿ, ಆಸೀಸ್ 63.75 ಪ್ರತಿಶತ ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ, ದಕ್ಷಿಣ ಆಫ್ರಿಕಾ (63.75), ಭಾರತ (54, 54), ಪಾಕಿಸ್ತಾನ (53.98) ಮತ್ತು ಇಂಗ್ಲೆಂಡ್ (53.07) ಸ್ಥಾನಗಳಲ್ಲಿವೆ
ಮತ್ತೊಂದೆಡೆ ರೋಹಿತ್ ಶರ್ಮಾ ಕೂಡ ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುವ ಮೂಲಕ ಅಪರೂಪದ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡ ಆಡುವ ಐತಿಹಾಸಿಕ ಪಂದ್ಯವನ್ನು ಮುನ್ನಡೆಸುವ ಸುವರ್ಣಾವಕಾಶ ರೋಹಿತ್ ಪಾಲಾಗಿದೆ.
1974 ರಲ್ಲಿ ಅಜಿತ್ ವಾಡೇಕರ್ ಮೊದಲ ODI, ಸಚಿನ್ ತೆಂಡೂಲ್ಕರ್ 300 ನೇ ODI, ಗಂಗೂಲಿ 500 ನೇ ODI ಮತ್ತು 700, 800 ಮತ್ತು 900 ನೇ ODI ಗೆ ಧೋನಿ ನಾಯಕರಾಗಿದ್ದರು.








