ind-vs-wi-1st-odi : ಚಹಾಲ್ ದಾಳಿಗೆ ನಲುಗಿದ ವಿಂಡೀಸ್, 176ಕ್ಕೆ ಆಲೌಟ್
ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ಇಂಡೋ – ವೆಸ್ಟ್ ಇಂಡೀಸ್ ನಡುವಿನ ಮೊದಲ ಪಂದ್ಯದಲ್ಲಿ ಕೆರಿಬಿಯನ್ಸ್ ತಂಡ 176ಕ್ಕೆ ಆಲೌಟ್ ಆಗಿದೆ.
ಸ್ಪಿನ್ನರ್ ಯಜುವೇಂದ್ರ ಚಹಾಲ್, ವಾಷಿಂಗ್ ಟನ್ ಸುಂದರ್ ಸ್ಪಿನ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ಬ್ಯಾಟರ್ ಗಳು 176ಕ್ಕೆ ಸರ್ವಪತನ ಕಂಡಿದ್ದಾರೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬೌಲಿಂಗ್ ಆಯ್ಕೆ ಮಾಡಿಕೊಂಡರು.
ನಾಯಕನ ನಿರ್ಣಯ ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು ಆರಂಭದಿಂದಲೇ ವೆಸ್ಟ್ ಇಂಡೀಸ್ ಬ್ಯಾಟರ್ ಗಳನ್ನ ಕಾಡಿದರು.
ಇನ್ನಿಂಗ್ಸ್ ನ ಮೂರನೇ ಓವರ್ ನಲ್ಲಿ ಹೊಪೆ ವಿಕೆಟ್ ತೆಗೆಯುವ ಮೂಲಕ ಟೀಂ ಇಂಡಿಯಾಗೆ ಸಿರಾಜ್ ಬ್ರೇಕ್ ತಂದುಕೊಟ್ಟರು.
ಇದಾದ ಬಳಿಕ ವಾಷಿಂಗ್ ಟನ್ ಸುಂದರ್, ಬ್ರಂಡನ್ ಕಿಂಗ್, ಡರ್ರೆನ್ ಬ್ರಾವೋ ವಿಕೆಟ್ ತೆಗೆದರು.
ಈ ಹಂತದಲ್ಲಿ ದಾಳಿಗೆ ಬಂದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್, ಒಂದೇ ಓವರ್ ನಲ್ಲಿ ನಿಕೋಲಸ್ ಪೂರನ್, ಮತ್ತು ಕಿರಾನ್ ಪೋಲಾರ್ಡ್ ವಿಕೆಟ್ ಗೆ ಎದುರಾಳಿ ತಂಡಕ್ಕೆ ಮರ್ಮಾಘಾತ ನೀಡಿದರು.
ಇಲ್ಲಿಂದ ಕೆರಿಬಿಯನ್ಸ್ ಪೆವಿಲಿಯಲ್ ಪರೇಡ್ ನಡೆಯಿತು. ಈ ಹಂತದಲ್ಲಿ ಜೇಸನ್ ಹೋಲ್ಡರ್, ವೆಸ್ಟ್ ಇಂಡೀಸ್ ಗೆ ನೆರವಾದ್ರು, ಅವರು 57 ಗಳಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಕೊಟ್ಟರು.
ಅಂತಿಮವಾಗಿ 43.5 ಓವರ್ ಗಳಿಗೆ ವೆಸ್ಟ್ ಇಂಡೀಸ್ ತಂಡ 176 ರನ್ ಗಳಿಗೆ ತನ್ನೇಲ್ಲಾ ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಚಹಾಲ್ 4 ವಿಕೆಟ್, ವಾಷಿಂಗ್ ಟನ್ ಸುಂದರ್ 3 ವಿಕೆಟ್, ಪ್ರಸಿದ್ಧ್ ಕೃಷ್ಣ 2 ವಿಕೆಟ್, ಸಿರಾಜ್ 1 ವಿಕೆಟ್ ಪಡೆದರು.