Ind Vs Wi 2nd ODI : ಪಂತ್ ಗೆ ಬಡ್ತಿ.. ರೋಹಿತ್ ಗೆ ಜೋಡಿ ind-vs-wi-2nd-odi-west indies won toss
ಅಹ್ಮದಾಬಾದ್ : ವೆಸ್ಟ್ ಇಂಡೀಸ್ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಪರ ವಿಕೆಟ್ ಕೀಪರ್ ರಿಷಬ್ ಪಂತ್, ಇನ್ನಿಂಗ್ಸ್ ಓಪನ್ ಮಾಡಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಭಾತರದಲ್ಲಿ ನಿರೀಕ್ಷೆಯಂತೆ ಒಂದು ಬದಲಾವಣೆ ಮಾಡಲಾಗಿದೆ. ಉಪನಾಯಕ ಕೆ.ಎಲ್.ರಾಹುಲ್ ಕಂ ಬ್ಯಾಕ್ ಮಾಡಿದ್ದಾರೆ. ಆದ್ರೆ ಅವರು ಇನ್ನಿಂಗ್ಸ್ ಆರಂಭಿಸಿಲ್ಲ. ಬದಲಿಗೆ ರಿಷಬ್ ಪಂತ್, ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿಗೆ ಇದು ತವರಿನಲ್ಲಿ ನೂರನೇ ಏಕದಿನ ಪಂದ್ಯವಾಗಿದೆ.
ಭಾರತ ತಂಡ ಹೀಗಿದೆ : ರೋಹಿತ್ ಶರ್ಮಾ, ರಿಷಬ್ ಪಂತ್, ಕೆ.ಎಲ್.ರಾಹುಲ್.ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ ಟನ್ ಸುಂದರ್, ಶರ್ದೂಲ್ ಠಾಕೂರ್, ಮೊಹ್ಮದ್ ಸಿರಾಜ್, ಯಜುವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ
ವೆಸ್ಟ್ ಇಂಡಿಸ್ ತಂಡ : ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಶಾಯ್ ಹೋಪ್(w), ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್(c), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್









