ನಾವೇ ಗೆಲ್ಲುತ್ತೇವೆ… ಪೋಲಾರ್ಡ್ ಸ್ಟ್ರಾಂಗ್ ವಾರ್ನಿಂಗ್ ind-vs-wi-Kieran Pollard reaction saaksha tv
ಇಂಗ್ಲೆಂಡ್ ವಿರುದ್ಧ ನಡೆದ 5 ಟಿ 20 ಸಿರೀಸ್ ಅನ್ನು 3 – 2 ಅಂತರದೊಂದಿಗೆ ವೆಸ್ಟ್ ಇಂಡೀಸ್ ತಂಡ ಕೈವಶ ಮಾಡಿಕೊಂಡಿದೆ.
ಇದೀಗ ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್ ಗಳ ಸರಣಿಯತ್ತ ವಿಂಡೀಸ್ ದೈತ್ಯರು ಚಿತ್ತ ಹರಿಸಿದ್ದು, ರೋಹಿತ್ ಶರ್ಮಾ ಪಡೆಗೆ ಸ್ಟ್ರಾಂಗ್ ವಾರ್ನಿಂಗ್ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಟಿ 20 ಸರಣಿಯ ಅಂತಿಮ ಪಂದ್ಯದ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರಾನ್ ಪೋಲಾರ್ಡ್, ಟೀಂ ಇಂಡಿಯಾ ವಿರುದ್ಧದ ಸರಣಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಮಗೆ ಅದ್ಭುತ ಜಯ ಸಿಕ್ಕಿದೆ. ಈಗ ನಾವು ಭಾರತ ಪ್ರವಾಸದ ಮೇಲೆ ದೃಷ್ಠಿ ನೆಟ್ಟಿದ್ದೇವೆ.
ನಾವು ಈ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಖಂಡಿತವಾಗಿಯೂ ಸೋಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವಿರುದ್ಧ ಸೆಣಸಾಡಲು ನಾವು ಎದುರು ನೋಡುತ್ತಿದ್ದೀವಿ ಎಂದು ಪೋಲಾರ್ಡ್ ಹೇಳಿದ್ದಾರೆ.
ಇನ್ನು ಭಾರತದ ಪ್ರವಾಸದ ಭಾಗವಾಗಿ ವೆಸ್ಟ್ ಇಂಡೀಸ್ ತಂಡ, ಮೂರು ಏಕದಿನ, ಮೂರು ಟಿ 20 ಪಂದ್ಯಗಳನ್ನಾಡಲಿದೆ.
ಅಹ್ಮದಾಬಾದ್ ವೇದಿಕೆಯಾಗಿ ಫೆಬ್ರವರಿ 6ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಕೊರೊನಾ ಸೋಂಕು ಮೂರನೇ ಅಲೆ ಕಾರಣವಾಗಿ ಇದೇ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಇತ್ತ ಟಿ 20 ಸರಣಿ ಕೊಲ್ಕತ್ತಾದ ಮೈದಾನದಲ್ಲಿ ನಡೆಯಲಿದೆ.
ಇನ್ನು ಫೆಬ್ರವರಿ ಆರರಂದು ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಉಪನಾಯಕ ಕೆ.ಎಲ್.ರಾಹುಲ್ ಅಲಭ್ಯರಾಗಿದ್ದಾರೆ.
ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ದೀಪಕ್ ಹೂಡಾ ಮೊದಲ ಬಾರಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರೇ ಕುಲ್ ದೀಪ್ ಯಾದವ್ ತಂಡಕ್ಕೆ ವಾಪಸ್ ಆಗಿದ್ದಾರೆ.









