ಬೆಳಗಾವಿ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಿಎಸ್ ಐ ಅಮಾನತುಗೊಂಡಿದ್ದಾರೆ.
ಹುಕ್ಕೇರಿ(Hukkeri)ತಾಲೂಕಿನ ಸಂಕೇಶ್ವರ ಪಟ್ಟಣ ಠಾಣೆಯ ಪಿಎಸ್ಐ ಅಮಾನತು ಮಾಡಲಾಗಿದೆ. ಹೀಗಾಗಿ ಸಸ್ಪೆಂಡೆಡ್ ಪಿಎಸ್ಐ(Suspended PSI)ನರಸಿಂಹರಾಜು, ಸಿಬ್ಬಂದಿ ವಿರುದ್ಧ ಗುಡುಗಿದ್ದಾರೆ. ಸಿಪಿಐ ಮತ್ತು ಕೆಲ ಸಿಬ್ಬಂದಿ ವಿರುದ್ಧ ಪಿಎಸ್ಐ ಗಂಭೀರ ಆರೋಪ ಮಾಡಿದ್ದಾರೆ. ನನ್ನ ವಿರುದ್ದ ಮಹಿಳೆ, ಸಿಪಿಐ, ಕೆಲ ಪೊಲೀಸ್ ಸಿಬ್ಬಂದಿ ಸೇರಿ ಷಡ್ಯಂತ್ರ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿ ನಡೆಸಿ, ‘ನಾಲ್ಕು ತಿಂಗಳ ಹಿಂದೆ ಅಕ್ಕ-ಪಕ್ಕದವರ ಜಗಳ ಸಂಬಂಧ ಮಹಿಳೆ ದೂರು ನೀಡಿದ್ದಳು. ಆಕೆಯ ನಂಬರ್ ಪಡೆದು ನನ್ನ ನಂಬರ್ ನೀಡಿದ್ದೆ. ತನ್ನ ಮಗನಿಗೆ ಹೃದಯಸಂಬಂಧಿ ಕಾಯಿಲೆ ಇದೆ ಎಂದು ಸಹಾಯಕ್ಕೆ ಮನವಿ ಮಾಡಿದ್ದಳು. ತಂಗಿಯಾಗಿ, ಹಣದ ಸಹಾಯ ಮಾಡಿದ್ದೆ ಎಂದು ಹೇಳಿದ್ದಾರೆ. ಆನಂತರ ಮುನಿಸು ಬಂದು ಎಸ್‌ಪಿಗೆ ದೂರು ನೀಡುತ್ತೇನೆ ಎಂದಳು. ಆಕೆಯ ಬಳಿ ಸಿಪಿಐ ಶಿವಶರಣ ಅವಜಿ ಅರ್ಜಿ ಪಡೆದು ಅದನ್ನು ಎಸ್‌ಪಿ ಸಾಹೇಬ್ರಿಗೆ ಕಳಿಸಿದರು. ಎಸ್‌ಪಿ ಸಾಹೇಬ್ರು ಒಂದೇ ದಿನದಲ್ಲಿ ಅಮಾನತು ಮಾಡಿದ್ದಾರೆ ಎಂದು ಹೇಳಿದ್ದಾರೆ.